ಮೊನ್ನೆಯಷ್ಟೇ ‘UI’ ಸಿನಿಮಾ ಟೀಸರ್‌ ಕುರಿತಂತೆ ಉಪೇಂದ್ರರ ಒಂದು ವೀಡಿಯೋ ಬಿಡುಗಡೆಯಾಗಿತ್ತು. ಈಗ ಚಿತ್ರತಂಡದಿಂದ ಮತ್ತೊಂದು ಪ್ರೋಮೊ ಬಿಡುಗಡೆಯಾಗಿದೆ. ಈ ವೀಡಿಯೋದಲ್ಲಿ ಉಪೇಂದ್ರ ತಮ್ಮ ಸಿನಿಮಾದ ಟೀಸರ್‌ ಬಿಡುಗಡೆ ದಿನಾಂಕ ರಿವೀಲ್‌ ಮಾಡಿದ್ದಾರೆ.

ತಮ್ಮ ಸಿನಿಮಾಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರೊಮೋಟ್‌ ಮಾಡುವುದು ನಟ, ನಿರ್ದೇಶಕ ಉಪೇಂದ್ರರ ಶೈಲಿ. ಈಗ ತಮ್ಮ ನಿರ್ದೇಶನದ ನೂತನ ‘UI’ ಸಿನಿಮಾಗೂ ಇದೇ ನೀತಿ ಅನುಸರಿಸುತ್ತಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಟೀಸರ್‌ ಕುರಿತಂತೆ ಒಂದು ವೀಡಿಯೋ ಹೊರಬಿದ್ದಿತ್ತು. ಆ ವೀಡಿಯೋದಲ್ಲಿ ಉಪೇಂದ್ರ, ‘ಸಿನಿಮಾಗೆ ನಾವು ಹೈಪ್‌ ಕ್ರಿಯೇಟ್‌ ಮಾಡಬಾರದು. ಸಿನಿಮಾನೇ ಹೈಪ್‌ ಕ್ರಿಯೇಟ್‌ ಮಾಡ್ಬೇಕು’ ಎಂದಿದ್ದರು. ಈ ವೀಡಿಯೋದಲ್ಲಿ ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್‌ ಮತ್ತು ನವೀನ್‌ ಕೂಡ ಇದ್ದರು. ಈಗ ಟೀಸರ್‌ ಕುರಿತಂತೆ ಮತ್ತೊಂದು ಪ್ರೋಮೊ ವೀಡಿಯೋ ಮಾಡಿದ್ದಾರೆ. ಇದರಲ್ಲೂ ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್‌ ಮತ್ತು ನವೀನ್‌ ಇದ್ದಾರೆ. ಸಾಕಷ್ಟು ಕ್ರಿಯೇಟೀವ್‌ ಆಗಿ ರೂಪಿಸಿರುವ ಈ ವೀಡಿಯೋ ಮೂಲಕ ‘UI’ ಟೀಸರ್‌ ಉಪೇಂದ್ರರ ಹುಟ್ಟುಹಬ್ಬವಾದ ಸೆಪ್ಟೆಂಬರ್‌ 18ರಂದು ಊರ್ವಶಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನವುದು ತಿಳಿದುಬರುತ್ತದೆ.

LEAVE A REPLY

Connect with

Please enter your comment!
Please enter your name here