GEO V ನಿರ್ದೇಶನದ ‘ಕುರ್ಬಾನಿ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಶೇನ್‌ ನಿಗಮ್‌ ಮತ್ತು ಆರ್ಶಾ ಚಾಂದಿನಿ ಜೋಡಿಯ ಜೊತೆ ಹಿರಿಯ ನಟ ಚಾರು ಹಾಸನ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಶೇನ್ ನಿಗಮ್ ಮತ್ತು ಆರ್ಶಾ ಚಾಂದಿನಿ ಬೈಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕುರ್ಬಾನಿ’ ಮಲಯಾಳಂ ಚಿತ್ರದ ಟೀಸರ್‌ಬಿಡುಗಡೆಯಾಗಿದೆ. GEO V ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟ ಚಾರುಹಾಸನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಶೇನ್ ಅರಣ್ಯದೊಳಗೆ ಸಂಚರಿಸುತ್ತಾ ಅಲ್ಲಿನ ವನ್ಯ ಜೀವಿಗಳನ್ನು ವೀಕ್ಷಿಸುವುದರೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಮತ್ತೊಂದೆಡೆ, ಸುಂದರವಾದ ಅರಣ್ಯದ ಹಿನ್ನೆಲೆಯೊಂದಿಗೆ ಆರ್ಷಾರನ್ನು ಪರಿಚಯಿಸಲಾಗಿದೆ. ಪ್ರಕೃತಿಯ ಸುಂದರ ನೋಟ, ಕಾಡಿನ ಮನಮೋಹಕ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಈ ಸಿನಿಮಾದಲ್ಲಿ ಶೇನ್ ಪಾತ್ರವು ಪ್ರಕೃತಿಯ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿರುವಂತೆ ಕಾಣುತ್ತದೆ.

Varnachithra Production ಬ್ಯಾನರ್‌ಅಡಿ ಮಹಾ ಸುಬೇರ್‌ ನಿರ್ಮಿಸಿರುವ ಚಿತ್ರಕೆ ಸಿನೋಜ್ ವೇಲಾಯುಧನ್ ಛಾಯಾಗ್ರಹಣ, ಜಾನ್‌ಕುಟ್ಟಿ ಸಂಕಲನ, ಎಂ ಜಯಚಂದ್ರನ್, ಅಫ್ಜಲ್ ಯೂಸುಫ್, ಮುಜೀಬ್ ಮಜೀದ್, ರಾಬಿನ್ ಥಾಮಸ್ ಮತ್ತು ರಾಬಿ ಅಬ್ರಹಾಂ ಸಂಗೀತ ಸಂಯೋಜನೆ, ಕೈತಪ್ರಮ್, ಮನು ಮಂಜಿತ್, ಅಜೀಶ್ ದಾಸನ್ ಸಾಹಿತ್ಯವಿದೆ. ಸೌಬಿನ್ ಶಾಹಿರ್, ಜಾಯ್ ಮ್ಯಾಥ್ಯೂ, ಹರಿಶ್ರೀ ಅಶೋಕನ್ ಮತ್ತು ಪ್ರಶಾಂತ್ ಅಲೆಕ್ಸಾಂಡರ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶೇನ್‌ ಅವರು ‘ಓಣಂ’ ಮತ್ತು ಡೋನಿ ಕ್ಸೇವಿಯರ್‌ ನಿರ್ದೇಶನದ ‘RDX’ ಸಿನಿಮಾಗಳ ನಂತರ ಶ್ಯಾಮ್ ಸಸಿ ನಿರ್ದೇಶನದ ಪೊಲೀಸ್ ಡ್ರಾಮಾ ‘ವೇಲಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂನಲ್ಲಿ ನಡೆಯುವ ಅವ್ಯವಸ್ಥೆ ಸುತ್ತ ಇದರ ಚಿತ್ರಕಥೆ ಸುತ್ತುತ್ತದೆ.

Previous articleUI ಟೀಸರ್‌ ಅಪ್‌ಡೇಟ್ಸ್‌ | ಟೀಸರ್‌ ರಿಲೀಸ್‌ ದಿನಾಂಕ ತಿಳಿಸಲು ಉಪೇಂದ್ರ ವಿಶೇಷ ಪ್ರೋಮೊ
Next article‘ವೆಲ್‌ಕಮ್‌ ಟು ದಿ ಜಂಗಲ್‌’ ಘೋಷಣೆ | ಅಕ್ಷಯ್‌ ಹಾಗೂ 24 ಬಾಲಿವುಡ್‌ ತಾರೆಯರ ಸಿನಿಮಾ

LEAVE A REPLY

Connect with

Please enter your comment!
Please enter your name here