ಅಭಿ ನಿರ್ದೇಶನದ ‘ಸೋಮು ಸೌಂಡ್‌ ಇಂಜಿನಿಯರ್‌’ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಧನಂಜಯ್ ರಂಜನ್ ರಚನೆಯ ಈ ಹಾಡಿಗೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಸ್ವರೂಪ್ ಖಾನ್ ಹಾಡಿದ್ದಾರೆ. ಶ್ರೇಷ್ಠ ಮತ್ತು ಶೃತಿ ಪಾಟೀಲ್‌ ಚಿತ್ರದ ಮುಖ್ಯಭೂಮಿಕೆ ಕಲಾವಿದರು.

ಚಿತ್ರನಿರ್ದೇಶಕ ಸೂರಿ ಅವರ ಶಿಷ್ಯ ಅಭಿ ಚೊಚ್ಚಲ ನಿರ್ದೇಶನದ ‘ಸೋಮು ಸೌಂಡ್‌ ಇಂಜಿನಿಯರ್‌’ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕ ನೆಲ, ಸೊಗಡಿನ ಸಿನಿಮಾಗಳ ಸಾಲಿಗೆ ಇದು ಹೊಸ ಸೇರ್ಪಡೆ. ‘ಸೈಲಂಟಾಗಿ ಸೌಂಡ್‌ ಮಾಡ್ತಾವ್ನೆ…’ ಹಾಡಿನಲ್ಲಿ ಚಿತ್ರದ ಕಥಾನಾಯಕ ಸೋಮು ಪಾತ್ರದ ವ್ಯಕ್ತಿತ್ವ ಅನಾವರಣಗೊಂಡಿದೆ. A2 ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಹಾಡು ಬಿಡುಗಡೆಯಾಗಿದೆ. ಧನಂಜಯ್‌ ರಂಜನ್‌ ರಚನೆಯ ಹಾಡಿಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಇದ್ದು, ಸ್ವರೂಪ್‌ ಖಾನ್‌ ಹಾಡಿದ್ದಾರೆ.

‘ಸಲಗ’ ಸಿನಿಮಾದ ಕೆಂಡ ಪಾತ್ರದ ಮೂಲಕ ಹೆಸರು ಮಾಡಿದ ಶ್ರೇಷ್ಠ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಪಾಟೀಲ್‌ ಚಿತ್ರದ ನಾಯಕಿ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಕತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕ್ರಿಸ್ಟೋಫರ್‌ ಕಿಣಿ ನಿರ್ಮಾಣದ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ರಚಿಸಿದ್ದಾರೆ. ಶಿವಸೇನಾ ಛಾಯಾಗ್ರಹಣ ಚಿತ್ರಕ್ಕಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿದೆ. ‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಮನೆ ಹುಡುಗ’, ‘ಟಗರು’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ರೀರೆಕಾರ್ಡಿಂಗ್‌ ನಡೆಯುತ್ತಿದೆ.

LEAVE A REPLY

Connect with

Please enter your comment!
Please enter your name here