ಬಾಲಿವುಡ್‌ನ ಯಶಸ್ವೀ ಹೀರೋಗಳಲ್ಲೊಬ್ಬರಾದ ವರುಣ್ ಧವನ್‌ ನಟನೆಯ ‘ಭೇಡಿಯಾ’ ಸಿನಿಮಾದ ಫಸ್ಟ್‌’ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲಿ ಇದೊಂದು ಹಾರರ್‌—ಥ್ರಿಲ್ಲರ್ ಎನಿಸುತ್ತದೆಯಾದರೂ ನಿರ್ದೇಶಕ ಅಮರ್ ಕೌಶಿಕ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಕಳೆದೊಂದು ದಶಕದಿಂದೀಚೆಗೆ ಸಾಲು, ಸಾಲಾಗಿ ಯಶಸ್ವೀ ಸಿನಿಮಾಗಳನ್ನು ಕೊಡುತ್ತಿರುವ ವರುಣ್ ಧವನ್‌ ನೂತನ ಸಿನಿಮಾ ‘ಭೇಡಿಯಾ’ದ ಫಸ್ಟ್‌’ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕೆಂಡದಂಥ ತೀಕ್ಷ್ಣ ನೋಟ, ಘಾಡ ವರ್ಣದ ವರುಣ್ ಲುಕ್‌ ಭೀತಿಯುಂಟುಮಾಡುತ್ತದೆ. ಅಮರ್ ಕೌಶಿಕ್ ನಿರ್ದೇಶನದ ಸಿನಿಮಾದ ಕತೆಯ ಬಗ್ಗೆ ಮಾತ್ರ ಯಾವುದೇ ಸುಳಿವಿಲ್ಲ. ವರುಣ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಫಸ್ಟ್‌’ಲುಕ್‌ ಶೇರ್ ಮಾಡಿದ್ದು, ಬಾಲಿವುಡ್‌ನ ಅವರ ತಾರಾಸ್ನೇಹಿತರು ನಟನಿಗೆ ಶುಭ ಹಾರೈಸಿದ್ದಾರೆ. ಇಲ್ಲಿಗೆ ಸರಿಯಾಗಿ ಒಂದು ವರ್ಷದ ನಂತರ 2022ರ ನವೆಂಬರ್‌ 25ರಂದು ಸಿನಿಮಾ ತೆರೆಕಾಣಲಿದೆ.

“ಇದೊಂದು ಕಾಲ್ಪನಿಕ ಕತೆ. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ಇಲ್ಲಿ ನಾವು ಬೇರೇನೋ ವಿಶೇಷವಾದದ್ದನ್ನು ಹೇಳುತ್ತಿದ್ದೇವೆ ಎಂದೆನಿಸಿದೆ. ಪಾಥ್‌ಬ್ರೇಕಿಂಗ್ ವಿಎಫ್‌ಎಕ್ಸ್‌ ಜೊತೆ ಸಿನಿಮಾ ವೀಕ್ಷಿಸುವವರಿಗೆ ತೆರೆಯ ಮೇಲೆ ಇದೊಂದು ಹಬ್ಬವಾಗಲಿದೆ” ಎನ್ನುತ್ತಾರೆ ನಿರ್ದೇಶಕ ಅಮರ್‌ ಕೌಶಿಕ್‌. ಹಾಲಿವುಡ್‌ನ ವಿಶ್ಯುಯಲ್ ಎಫೆಕ್ಟ್ ಸ್ಟುಡಿಯೋ ‘ಮಿಸ್ಟರ್‌ ಎಕ್ಸ್‌’ ಈ ಸಿನಿಮಾದ ವಿಎಫ್‌ಎಕ್ಸ್‌ ಹೊಣೆ ಹೊತ್ತಿದೆ. ಕೃತಿ ಸನೂನ್ ಚಿತ್ರದ ನಾಯಕಿ. ಇನ್ನು ವರುಣ್ ಧವನ್ ಇತ್ತೀಚೆಗೆ ‘ಕೂಲಿ ನಂ.1’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾರಾ ಅಲಿ ಖಾನ್ ಈ ಚಿತ್ರದಲ್ಲಿ ವರುಣ್‌ಗೆ ಜೋಡಿಯಾಗಿದ್ದರು. ವರುಣ್‌ರ ‘ಜುಗ್ ಜುಗ್‌ ಜೀಯೊ’ ಹಿಂದಿ ಸಿನಿಮಾ ತೆರೆಗೆ ಸಿದ್ಧವಾಗಿದೆ.

LEAVE A REPLY

Connect with

Please enter your comment!
Please enter your name here