ಇಂದು ನಟ ಪೃಥ್ವಿರಾಜ್‌ ಬರ್ತ್‌ಡೇ. ಹುಟ್ಟುಹಬ್ಬದ ಅಂಗವಾಗಿ ‘ಸಲಾರ್‌’ ತೆಲುಗು ಚಿತ್ರದಲ್ಲಿನ ಅವರ ಪಾತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ಪ್ರಭಾಸ್‌ ಹೀರೋ ಆಗಿ ನಟಿಸಿರುವ PAN ಇಂಡಿಯಾ ಸಿನಿಮಾ ಇದೇ ಡಿಸೆಂಬರ್‌ 22ರಂದು ತೆರೆಕಾಣಲಿದೆ.

ಖ್ಯಾತ ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌ ಅವರ ಹುಟ್ಟುಹಬ್ಬವಿಂದು. ‘ಸಲಾರ್‌’ ಸಿನಿಮಾದ ಪ್ರಮುಖ ಖಳನಟ ಅವರು. ಬರ್ತ್‌ಡೇ ಅಂಗವಾಗಿ ತಮ್ಮ ಸಿನಿಮಾದ ನಟ ನಿರ್ವಹಿಸಿರುವ ‘ವರ್ಧರಾಜ ಮನ್ನಾರ್‌’ ಪಾತ್ರದ ಪೋಸ್ಟರ್‌ ಬಿಡುಗಡೆ ಮಾಡಿದೆ ‘ಸಲಾರ್‌’ ತಂಡ. ಆಕ್ಷನ್ – ಥ್ರಿಲ್ಲರ್ ‘ಸಲಾರ್‌ ಭಾಗ 1 – ಕದನ ವಿರಾಮ’ ಸಿನಿಮಾದ ಹೀರೋ ಪ್ರಭಾಸ್. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ತೆಲುಗು ಚಿತ್ರವಿದು. ಪೃಥ್ವಿರಾಜ್‌ ಈ ಚಿತ್ರದ ಪೋಸ್ಟರ್‌ನಲ್ಲಿ ಹಿಂದೆಂದಿಗಿಂತಲೂ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆಯು ಕ್ರಿಮಿನಲ್ ಗ್ಯಾಂಗ್‌ಗಳ ಕಥಾಹಂದರ. ನಾಯಕ ಪ್ರಭಾಸ್‌ಗೆ ಎದುರಾಳಿಯಾಗದ ನಟಿಸಿರುವ ಪೃಥ್ವಿರಾಜ್‌, ‘ಈ ಸಿನಿಮಾದಲ್ಲಿ ಎರಡೂ ಪಾತ್ರಗಳಿಗೆ ಸಮಾನವಾದ ಶಕ್ತಿ ಮತ್ತು ಸ್ಕ್ರೀನ್‌ಸ್ಪೇಸ್‌ ಇದೆ. ನಾಯಕನಂತೆಯೇ ಎದುರಾಳಿಯ ಪಾತ್ರವೂ ಮಹತ್ವದ್ದಾಗಿದೆ. ಆದ್ದರಿಂದ ನಾಯಕನನ್ನು ಖಳನಾಯಕನಿಗಿಂತ ಶಕ್ತಿಶಾಲಿ ಎಂದು ಕರೆಯಲಾಗುವುದಿಲ್ಲ. ಬದಲಾಗಿ ನಟ ಎನ್ನಲಾಗುವುದು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಈ ಸಿನಿಮಾವನ್ನು Hombale Films ಬ್ಯಾನರ್‌ ಅಡಿ ವಿಜಯ ಕಿರಗಂದೂರು ನಿರ್ಮಿಸಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಶ್ರುತಿ ಹಾಸನ್, ಜಗಪತಿ ಬಾಬು, ಟೀನೂ ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 22, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೇ ದಿನಾಂಕದಂದು ಶಾರುಖ್ ಖಾನ್ ಅಭಿನಯದ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡುಂಕಿ’ ಹಿಂದಿ ಚಿತ್ರವೂ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here