ಡಿಸ್ಕವರಿ ಪ್ಲಸ್‌ನ ಜನಪ್ರಿಯ ‘ಇನ್‌ ಟು ದಿ ವೈಲ್ಡ್‌’ ಶೋನಲ್ಲಿ ಬೇರ್‌ ಗ್ರಿಲ್ಸ್‌ ಜೊತೆ ಬಾಲಿವುಡ್ ನಟ ವಿಕ್ಕಿ ಕೌಶಲ್‌ ಪಾಲ್ಗೊಂಡಿರುವ ಶೋ ನವೆಂಬರ್ 12ರಂದು ಪ್ರೀಮಿಯರ್ ಆಗಲಿದೆ. ಈ ಹಿಂದೆ ಶೋನಲ್ಲಿ ರಜನೀಕಾಂತ್‌, ಅಕ್ಷಯ್ ಕುಮಾರ್‌, ಅಜಯ್ ದೇವಗನ್‌ ಅತಿಥಿಗಳಾಗಿ ಪಾಲ್ಗೊಂಡಿದ್ದರು.

‘ಸರ್ದಾರ್ ಉದಾಮ್‌’ ಸಿನಿಮಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಡಿಸ್ಕವರಿ ಪ್ಲಸ್‌ನ ಜನಪ್ರಿಯ ಅಡ್ವೆಂಚರ್ ಶೋ ‘ಇನ್ ಟು ದಿ ವೈಲ್ಡ್‌’ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ಶೋನ ಫಸ್ಟ್ ಲುಕ್ ಬಿಡಗುಡೆಯಾಗಿದ್ದು, ನವೆಂಬರ್‌ 12ರ ಶುಕ್ರವಾರ ಶೋ ಪ್ರಸಾರವಾಗಲಿದೆ. ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಫಸ್ಟ್ ಲುಕ್ ಹಂಚಿಕೊಂಡಿರುವ ವಿಕ್ಕಿ ಕೌಶಲ್‌, “ಇದು ನನಗೆ ಲೈಫ್‌ಟೈಮ್ ಆಪರ್ಚುನಿಟಿ. ಸರ್ವೈವಲ್ ಎಕ್ಸ್‌’ಪರ್ಟ್ ಬೇರ್‌ ಗ್ರಿಲ್ಸ್‌ ಜೊತೆಗಿನ ಅಪರೂಪದ ಸಾಹಸ. ಶುಕ್ರವಾರ ಪ್ರಸಾರವಾಗುವ ಶೋನಲ್ಲಿ ಹಲವು ಅಚ್ಚರಿಗಳನ್ನು ನೀವು ನೋಡಲಿದ್ದೀರಿ” ಎಂದು ಬರೆದುಕೊಂಡಿದ್ದಾರೆ. 2019ರಲ್ಲಿ ಡಿಸ್ಕವರಿ ಪ್ಲಸ್‌ನ ‘ಮ್ಯಾನ್ ವಿಥ್ ವೈಲ್ಡ್‌’ ಶೋನಲ್ಲಿ ಒಂದು ಎಪಿಸೋಡ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.

ಇತ್ತೀಚೆಗೆ ಚಾನಲ್‌ನ ‘ಇನ್ ಟು ದಿ ವೈಲ್ಡ್‌’ ಶೋನಲ್ಲಿ ಖ್ಯಾತ ಭಾರತೀಯ ನಟರಾದ ರಜನೀಕಾಂತ್‌, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅತಿಥಿಗಳಾಗಿ ಸಾಹಸಗಳಲ್ಲಿ ಭಾಗಿಯಾಗಿದ್ದರು. ಡಿಸ್ಕವರಿಯ ‘ಮ್ಯಾನ್ ವಿತ್ ವೈಲ್ಡ್‌’ ಶೋನ ಮತ್ತೊಂದು ಸೃಜನಾತ್ಮಕ ಅವತರಣಿಕೆ ‘ಇನ್ ಟು ದಿ ವೈಲ್ಡ್‌’. ಜಾಗತಿಕವಾಗಿ ಅಪಾರ ವೀಕ್ಷಕರನ್ನು ಸೆಳೆದಿರುವ ಶೋನಲ್ಲಿ ಭಾಗವಹಿಸುವ ಅವಕಾಶವನ್ನು ಸೆಲೆಬ್ರಿಟಿಗಳು ಪ್ರತಿಷ್ಠೆಯ ವಿಷಯ ಎಂದೇ ಭಾವಿಸುತ್ತಾರೆ. ‘ಸರ್ದಾರ್ ಉದಮ್‌’ ಸಿನಿಮಾ ಯಶಸ್ಸಿನ ನಂತರ ನಟ ವಿಕ್ಕಿ ಕೌಶಲ್‌ ಈಗ ‘ಸ್ಯಾಮ್ ಬಹದ್ದೂರ್‌’ ಹಿಂದಿ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಫೀಲ್ಡ್ ಮಾರ್ಷಲ್‌ ಸ್ಯಾಮ್ ಮಾನಿಕ್‌ಷಾ ಅವರ ಬದುಕು – ಸಾಧನೆ ಆಧರಿಸಿದ ಬಯೋಪಿಕ್‌ ಚಿತ್ರವಿದು. ಮೇಘನಾ ಗುಲ್ಜಾರ್‌ ನಿರ್ದೇಶಕಿ.

LEAVE A REPLY

Connect with

Please enter your comment!
Please enter your name here