ವಿಜಯ್‌ ಮತ್ತು ಪ್ರಭುದೇವ ಬಹಳ ವರ್ಷಗಳ ನಂತರ ಜೊತೆಯಾಗುತ್ತಿದ್ದಾರೆ. ವೆಂಕಟ್‌ ಪ್ರಭು ಅವರು ಈ ಚಿತ್ರ ನಿರ್ಮಿಸಲಿದ್ದು, ಜ್ಯೋತಿಕಾ ಮತ್ತು ಪ್ರಿಯಾಂಕಾ ಮೋಹನ್‌ ನಾಯಕಿಯರಾಗಿ ನಟಿಸಲಿದ್ದಾರೆ. ವಿಜಯ್‌ರ ‘ಲಿಯೋ’ ನಂತರ ಈ ಸಿನಿಮಾ ಸೆಟ್ಟೇರಲಿದೆ.

ನಟರಾದ ವಿಜಯ್ ಮತ್ತು ಪ್ರಭುದೇವ ಬಹಳ ವರ್ಷಗಳ ನಂತರ ತೆರೆ ಹಂಚಿಕೊಳ್ಳಲಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಈ ಯೋಜನೆಗೆ ಇದೇ ವರ್ಷ ಚಾಲನೆ ಸಿಗಲಿದೆ. ಸದ್ಯ ವಿಜಯ್ ಅಭಿಮಾನಿಗಳು ಲೋಕೇಶ್ ಕನಗರಾಜ್ ನಿರ್ದೇಶನದ ತಮ್ಮ ನಟನ ‘ಲಿಯೋ’ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಜಯ್‌ರ ಮುಂದಿನ ಸಿನಿಮಾಗೆ ಸಂಬಂಧಿಸಿದ ಸುದ್ದಿಗಳು ಕೇಳಿಬರುತ್ತಿವೆ. ಈ ಚಿತ್ರವನ್ನು AGS Entertainment ನಿರ್ಮಿಸುತ್ತಿದ್ದು, ವೆಂಕಟ್ ಪ್ರಭು ವ್ಯವಹಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಚಿತ್ರವನ್ನು ಪ್ರಭುದೇವ ಅವರೇ ನಿರ್ದೇಶಿಸಲಿದ್ದಾರೆಯೇ ಇಲ್ಲವೇ ನಟನಾಗಿ ತೆರೆ ಹಂಚಿಕೊಳ್ಳಲಿದ್ದಾರೆಯೇ ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ. ಸಿನಿಮಾಗೆ ಯುವನ್ ಶಂಕರ್ ರಾಜಾ ಸಂಗೀತ ನೀಡುತ್ತಿದ್ದು, ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿ ಕುರಿತ ವಿವರಗಳನ್ನು ‘ಲಿಯೋ’ ಸಿನಿಮಾದ ಬಿಡುಗಡೆಯ ಬಳಿಕವೇ ಹಂಚಿಕೊಳ್ಳುತ್ತೇವೆಂದು ವೆಂಕಟ್ ಪ್ರಭು ತಿಳಿಸಿದ್ದಾರೆ. ಚಿತ್ರದಲ್ಲಿ ಜ್ಯೋತಿಕಾ ಮತ್ತು ಪ್ರಿಯಾಂಕಾ ಮೋಹನ್ ನಾಯಕಿಯರಾಗಿ ನಟಿಸುವ ಸಾಧ್ಯತೆಗಳಿವೆ. ವಿಜಯ್ ಮತ್ತು ಪ್ರಭುದೇವ ಈ ಹಿಂದೆ ‘ರೌಡಿ ರಾಥೋರ್’, ‘ಪೋಕಿರಿ’ ಮತ್ತು ‘ವಿಲ್ಲು’ ಚಿತ್ರಗಳ ಹಾಡಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಎಲ್ಲಾ ಚಲನಚಿತ್ರಗಳನ್ನು ಪ್ರಭುದೇವ ಅವರೇ ನಿರ್ದೇಶಿಸಿದ್ದಾರೆ.

Previous article‘ಜಾನೇ ಜಾನ್‌’ ಟೀಸರ್‌ | ಕರೀನಾ ಕಪೂರ್‌ ಸಿನಿಮಾ ಸೆಪ್ಟೆಂಬರ್‌ 21ರಿಂದ Netflixನಲ್ಲಿ
Next articleಮೂರು ದಶಕಗಳ ನಂತರ ಅಮಿತಾಭ್‌ – ರಜನೀಕಾಂತ್‌ ಸಿನಿಮಾ | ಜ್ಞಾನವೇಲ್‌ ನಿರ್ದೇಶನ

LEAVE A REPLY

Connect with

Please enter your comment!
Please enter your name here