ಟಿ ಜೆ ಜ್ಞಾನವೇಲ್‌ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಮತ್ತು ರಜನೀಕಾಂತ್‌ ಜೊತೆಯಾಗಿ ನಟಿಸಲಿದ್ದಾರೆ. ‘ತಲೈವರ್‌ 170’ ತಾತ್ಕಾಲಿಕ ಶೀರ್ಷಿಕೆಯ ಈ ಚಿತ್ರವನ್ನು Lyca ಪ್ರೊಡಕ್ಷನ್ಸ್‌ ನಿರ್ಮಿಸಲಿದೆ. ಮಂಜು ವಾರಿಯರ್‌, ಫಹಾದ್‌ ಫಾಸಿಲ್‌, ಶರ್ವಾನಂದ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಭಾರತೀಯ ಚಿತ್ರರಂಗದ ಮೇರು ತಾರೆಯರಾದ ಅಮಿತಾಭ್‌ ಬಚ್ಚನ್‌ ಮತ್ತು ರಜನೀಕಾಂತ್‌ ಈ ಹಿಂದೆ ‘ಹಮ್’ (1991) ಹಿಂದಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಆಕ್ಷಮ್‌ – ಕ್ರೈಂ ಡ್ರಾಮಾದಲ್ಲಿ ಇವರಿಬ್ಬರು ಸಹೋದರರಾಗಿ ನಟಿಸಿದ್ದರು. ಮುಕುಲ್ ಎಸ್ ಆನಂದ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಇದೀಗ ಮೂರು ದಶಕಗಳ ನಂತರ ಬಚ್ಚನ್‌ ಮತ್ತು ರಜನೀಕಾಂತ್‌ ಮತ್ತೆ ಜೊತೆಯಾಗುತ್ತಿದ್ದಾರೆ. ‘ಜೈ ಭೀಮ್‌’ ಖ್ಯಾತಿಯ ಟಿ ಜೆ ಜ್ಞಾನವೇಲ್ ನಿರ್ದೇಶನದಲ್ಲಿ ತಯಾರಾಗಲಿರುವ ‘ತಲೈವಾ 170’ ತಮಿಳು ಸಿನಿಮಾ ಸೆಟ್ಟೇರಿದೆ. ಅಮಿತಾಬ್‌ ಬಚ್ಚನ್‌ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಮಂಜು ವಾರಿಯರ್, ಫಹಾದ್ ಫಾಸಿಲ್, ಶರ್ವಾನಂದ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಲಿದ್ದಾರೆ ಎನ್ನುವುದು ವಿಶೇಷ. ‘ತಲೈವರ್ 170’ ಚಿತ್ರವನ್ನು Lyca Productions ನಿರ್ಮಿಸಲಿದೆ. ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜಿಸಲಿದ್ದಾರೆ. ತನ್ನ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ಸಿನಿಮಾ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ Lyca ಪ್ರೊಡಕ್ಷನ್ಸ್‌, ”We are feeling honoured to announce our next association with Superstar rajinikanth for ‘Thalaivar170” ಎಂದು ಬರೆದುಕೊಂಡಿದೆ. ಇನ್ನು ರಜಿನಿ ಅವರ ‘ಜೈಲರ್’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬಹುದೊಡ್ಡ ಯಶಸ್ಸು ಕಂಡಿದೆ. ಚಿತ್ರದ ಗಳಿಕಗೆ 600 ಕೋಟಿ ರೂಪಾಯಿ ದಾಟಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, Sun pictures ನಿರ್ಮಿಸಿದೆ.

Previous articleವರ್ಷಗಳ ನಂತರ ತೆರೆ ಹಂಚಿಕೊಳ್ಳಲಿರುವ ವಿಜಯ್ – ಪ್ರಭುದೇವ
Next articleಅಪ್ಪಟ ಮನರಂಜನೆಯ ಸುಂದರ ಕೌಟುಂಬಿಕ ಚಿತ್ರ ‘ಪದ್ಮಿನಿ’

LEAVE A REPLY

Connect with

Please enter your comment!
Please enter your name here