ಪುರಿ ಜಗನ್ನಾಥ್‌ ನಿರ್ದೇಶನದಲ್ಲಿ ವಿಜಯ್‌ ದೇವರಕೊಂಡ ಅಭಿನಯದ ‘Liger’ ಸಿನಿಮಾದ ಥೀಮ್‌ ಸಾಂಗ್‌ ಬಿಡುಗಡೆಯಾಗಿದೆ. ‘ವಾಟ್ ಲಗಾ ದೇಂಗೆ’ ಹಾಡಿನ ಮೇಕಿಂಗ್‌ ಅನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಾರೆ. ಆಗಸ್ಟ್‌ 25ರಂದು ಸಿನಿಮಾ ತೆರೆಕಾಣುತ್ತಿದೆ.

ವಿಜಯ್‌ ದೇವರಕೊಂಡ ನಟನೆಯ ಬಹುನಿರೀಕ್ಷಿತ ಸಿನಿಮಾ ‘Liger’ ಆಗಸ್ಟ್‌ 25ಕ್ಕೆ ತೆರೆಕಾಣಲಿದೆ. ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್‌ ಸಿನಿಮಾ ಕುರಿತಂತೆ ಹೆಚ್ಚುಮಾಡಿದೆ. ಇಂದು ಚಿತ್ರದ ಥೀಮ್‌ ಸಾಂಗ್‌ ರಿಲೀಸ್‌ ಆಗಿದೆ. ‘ವಾಟ್ ಲಗಾ ದೇಂಗೆ’ ಮಾಸ್ ಹಾಡು ರಿಲೀಸ್ ಆಗಿದ್ದು, ನಾಯಕನನ್ನು ವರ್ಣಿಸುವ ಹಾಡು ಇದಾಗಿದೆ. ವಿಜಯ್ ಮಾಸ್ ಡೈಲಾಗ್‌ನಿಂದ ಶುರುವಾಗುವ ಹಾಡು ಸದ್ಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಮೊದಲ ರಿಲೀಸ್ ಆಗಿದ್ದ ‘ಅಕ್ಡಿ ಪಕ್ಡಿ’ ಹಾಡಿಗೂ ಮೆಚ್ಚುಗೆ ಸಿಕ್ಕಿತ್ತು. ಇದೀಗ ‘ವಾಟ್ ಲಗಾ ದೇಂಗೆ’ ಮೋಟಿವೇಷನಲ್‌ ಮಾದರಿಯ ಹಾಡಾಗಿ ಸಿನಿಪ್ರೇಮಿಗಳಿಗೆ ಇಷ್ಟವಾಗಿದೆ. ಆಕರ್ಷಕ ವಿಶ್ಯುಯೆಲ್ಸ್‌ ಮತ್ತು ಫಾಸ್ಟ್‌ ಮ್ಯೂಸಿಕ್‌ನಿಂದ ಮೇಕಿಂಗ್‌ ಗಮನ ಸೆಳೆಯುತ್ತದೆ. ನಿರ್ದೇಶಕ ಪುರಿ ಜಗನ್ನಾಥ್‌ ರಚನೆ, ಸುನೀಲ್‌ ಕಶ್ಯಪ್‌ ಸಂಗೀತ ಸಂಯೋಜನೆಯ ಹಾಡಿಗೆ ಹೀರೋ ವಿಜಯ್‌ ದೇವರಕೊಂಡ ಅವರು ದನಿಯಾಗಿದ್ದಾರೆ ಎನ್ನುವುದು ವಿಶೇಷ. ಈ ಸಿನಿಮಾ ಮೂಲಕ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ಭಾರತೀಯ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ವಿಜಯ್‌ಗೆ ಜೋಡಿಯಾಗಿ ಅನನ್ಯ ಪಾಂಡೇ ನಟಿಸಿದ್ದು, ರಮ್ಯಾಕೃಷ್ಣ ಅವರಿಗೆ ಅಮ್ಮನ ಪಾತ್ರ. ಚಾರ್ಮಿ ಕೌರ್, ಕರಣ್‌ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ ನಿರ್ಮಾಣದ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್‌ 25ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here