ಬೋನಿಕಪೂರ್‌ ನಿರ್ಮಾಣದಲ್ಲಿ ಅಜಿತ್‌ ಕುಮಾರ್‌ ನಟನೆಯ ಆಕ್ಷನ್‌ – ಥ್ರಿಲ್ಲರ್‌ ‘ವಾಲಿಮೈ’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಭರ್ಜರಿ ಆಕ್ಷನ್‌ ಇರುವ ‘ವಾಲಿಮೈ’ ಕಾಲಿವುಡ್‌ ಆಕ್ಷನ್‌ ಸಿನಿಮಾಗಳಿಗೆ ಬೆಂಚ್‌ಮಾರ್ಕ್‌ ಚಿತ್ರವಾಗಲಿದೆ ಎನ್ನಲಾಗಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಅಜಿತ್‌ರ ‘ವಾಲಿಮೈ’ ತಮಿಳು ಸಿನಿಮಾ ಮೇಕಿಂಗ್‌ ವೀಡಿಯೋ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ವೀಡಿಯೋದಲ್ಲಿ ಹೀರೋ ಅಜಿತ್‌ ಡ್ಯೂಪ್‌ ಇಲ್ಲದೆ ಪಾಲ್ಗೊಂಡ ಬೈಕ್‌ ಸನ್ನಿವೇಶಗಳಿದ್ದವು. ಈ ಸಾಹಸ ಸನ್ನಿವೇಶಗಳನ್ನು ವೀಕ್ಷಿಸಿದ ಅಭಿಮಾನಿಗಳು ಅಜಿತ್‌ರನ್ನು ಹಾಲಿವುಡ್‌ ಆಕ್ಷನ್‌ ಹೀರೋ ಟಾಮ್‌ಕ್ರ್ಯೂಸ್‌ಗೆ ಹೋಲಿಸಿ ಮಾತನಾಡಿದ್ದರು. ಇದೀಗ ಟ್ರೈಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಭರಪೂರ ಆಕ್ಷನ್‌ ಇರುವ ಸೂಚನೆ ಸಿಕ್ಕಿದೆ. ಬೋನಿ ಕಪೂರ್‌ ನಿರ್ಮಾಣದಲ್ಲಿ ಎಚ್‌.ವಿನೋದ್‌ ನಿರ್ದೇಶಿಸುತ್ತಿರುವ ‘ವಾಲಿಮೈ’ ಕಾಲಿವುಡ್‌ ಆಕ್ಷನ್‌ ಸಿನಿಮಾಗಳಿಗೆ ಬೆಂಚ್‌ಮಾರ್ಕ್‌ ಚಿತ್ರವಾಗಲಿದೆ ಎನ್ನುವುದು ಚಿತ್ರದ ತಂತ್ರಜ್ಞರ ಹೇಳಿಕೆ. ಟ್ರೈಲರ್‌ ನೋಡಿದರೆ ಚಿತ್ರದಲ್ಲಿ ಬ್ಯಾಂಕ್‌ ಎಟಿಎಂ ವ್ಯಾನ್‌ಗಳನ್ನು ಟಾರ್ಗೆಟ್‌ ಮಾಡುವ ದುಷ್ಟರ ಕೂಟವೊಂದು ಇದ್ದಂತಿದೆ. ಅಜಿತ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಖಳರ ಚದುರಂಗದಾಟದಲ್ಲಿ ಹೀರೋ ಇಲಾಖೆಯಿಂದ ಸಸ್ಪೆಂಡ್‌ ಆಗುತ್ತಾನೆ. ಮುಂದೆ ಅವರನ್ನು ಮಟ್ಟ ಹಾಕುವ ಸೇಡಿನ ಕತೆ ಚಿತ್ರದಲ್ಲಿದ್ದಂತಿದೆ. ಅಜಿತ್‌ ಅಭಿಮಾನಿಗಳು ಅಪೇಕ್ಷಿಸುವ ಭರ್ಜರಿ ಆಕ್ಷನ್‌ ಸನ್ನಿವೇಶಗಳನ್ನು ನಿರ್ದೇಶಕರು ಚಿತ್ರದಲ್ಲಿ ತುಂಬಿದ್ದಾರೆ. ಬೋನಿಕಪೂರ್‌ ನಿರ್ಮಾಣ, ವಿನೋದ್‌ ನಿರ್ದೇಶನ ಮತ್ತು ಅಜಿತ್‌ ನಟನೆಯಲ್ಲಿ ಈ ಹಿಂದೆ ‘ನೇರ್ಕೊಂಡ ಪಾರವೈ’ ಸಿನಿಮಾ ತೆರೆಕಂಡಿತ್ತು. ಈಗ ಎರಡನೇ ಬಾರಿ ಮೂವರೂ ಜೊತೆಯಾಗಿದ್ದಾರೆ. ಈ ಮೂವರು ಮತ್ತೊಂದು ಸಿನಿಮಾಗೆ ಜೊತೆಯಾಗುವುದಾಗಿ ಹೇಳಿದ್ದು, ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ‘ವಾಲಿಮೈ’ 2022ರ ಪೊಂಗಲ್‌ಗೆ ಬಿಡಗಡೆಯಾಗಲಿದೆ.

Previous articleಸ್ಯಾಂಡಲ್‌ವುಡ್‌ – 2021; ಥಿಯೇಟರ್‌ಗೆ ಪರ್ಯಾಯ ವೇದಿಕೆಯಾದ OTT
Next articleವ್ಯಾಪಂ ಹಗರಣದಷ್ಟೇ ಸಂಕೀರ್ಣವಾದ ‘ದಿ ವಿಸಿಲ್ ಬ್ಲೋವರ್’

LEAVE A REPLY

Connect withPlease enter your comment!
Please enter your name here