ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಉದ್ಯಮಿ ವಿಜಯ ಸಂಕೇಶ್ವರ ಬಯೋಪಿಕ್‌ ಸಿನಿಮಾ ‘ವಿಜಯಾನಂದ’ ಮೊದಲ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಚಿತ್ರದ ಬಹಳಷ್ಟು ಪಾತ್ರಗಳ ಪರಿಚಯವಿದೆ. ವಿಶೇಷವಾಗಿ ಅನಂತನಾಗ್‌, ರವಿಚಂದ್ರನ್‌ ಗಮನ ಸೆಳೆಯುತ್ತಾರೆ.

ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಒಂದು ಟ್ರಕ್‌ನಿಂದ ತಮ್ಮ ಪ್ರಯಾಣ ಆರಂಭಿಸಿ ಮುಂದೆ ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್‌ ಕಂಪನಿ ಕಟ್ಟಿದವರು ವಿಜಯ ಸಂಕೇಶ್ವರ. ಒಂದೂವರೆ ಕಳೆದೆರೆಡು ದಶಕಗಳಿಂದ ಮಾದ್ಯಮ ಕ್ಷೇತ್ರದಲ್ಲೂ ಅವರು ಛಾಪು ಮೂಡಿಸಿದ್ದಾರೆ. ಅವರ ಈ ಯಶೋಗಾಥೆ ‘ವಿಜಯಾನಂದ’. ರಿಷಿಕಾ ಶರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಬಯೋಪಿಕ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮೂಲ ಕನ್ನಡದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಲಿದೆ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಿಹಾಲ್ ನಟಿಸುತ್ತಿದ್ದಾರೆ. ಅನಂತನಾಗ್, ವಿನಯಾ ಪ್ರಸಾದ್, ವಿ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ ಇತರೆ ಪ್ರಮುಖ ಕಲಾವಿದರು. ಗೋಪಿ ಸುಂದರ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ರವಿವರ್ಮ ಸಾಹಸ ಚಿತ್ರಕ್ಕಿದೆ.

Previous articleಪರ್ಪಲ್ ಹಾರ್ಟ್ಸ್‌; ನವಿರು ಪ್ರೇಮದ ಸೊಗಸಾದ ಚಿತ್ರಣ
Next articleಅದೇ ಪಾತ್ರಗಳು, ಅದೇ ಚಿತ್ರಗಳು, ಕಥೆ ಮಾತ್ರ ಬದಲಾಗುತ್ತಲೇ ಇರಬೇಕು

LEAVE A REPLY

Connect with

Please enter your comment!
Please enter your name here