ಪ್ರಮೋದ್‌ ಮುಖ್ಯಪಾತ್ರದಲ್ಲಿರುವ ‘ಬಾಂಡ್‌ ರವಿ’ ಸಿನಿಮಾ ಇಂದು ಸೆಟ್ಟೇರಿದೆ. ನಟರಾದ ವಿನೋದ್‌ ಪ್ರಭಾಕರ್‌ ಮತ್ತು ಧ್ರುವ ಸರ್ಜಾ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಇದೊಂದು ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಪ್ರಜ್ವಲ್‌.

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಯುವನಟ ಪ್ರಮೋದ್ ಅಭಿನಯದ ‘ಬಾಂಡ್‌ ರವಿ’ ಸಿನಿಮಾ ಇಂದು ಸೆಟ್ಟೇರಿದೆ. ‘ಬಾಂಡ್ ರವಿ’ಗೆ ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡಿದರೆ, ಧ್ರುವ ಸರ್ಜಾ ಕ್ಯಾಮೆರಾಗೆ ಚಾಲನೆ ನೀಡಿದರು. ಹೀರೋ ಪ್ರಮೋದ್‌ ಮಾತನಾಡಿ, “ನಾನು ಅಪ್ಪು ಸರ್ ಅಭಿಮಾನಿಯಾಗಿ ಬಾಂಡ್ ರವಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ‘ಅಣ್ಣಾ ಬಾಂಡ್’ ಸಿನಿಮಾದಲ್ಲಿ ಅಪ್ಪು ಸರ್ ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿ ಇರುತ್ತದೆ. ಹೀಗಾಗಿ ಅಪ್ಪು ಸರ್ ಮ್ಯಾನರಿಸಂ, ಆಕ್ಟಿಂಗ್ ಖದರ್ ಅನ್ನು ನೋಡಿ‌ ಕಲಿಯುತ್ತಿದ್ದೇನೆ. ಒಳ್ಳೆ ಪ್ರೊಡಕ್ಷನ್ ಹೌಸ್, ಪ್ಯಾಷನೇಟ್‌ ಪ್ರೊಡ್ಯೂಸರ್‌” ಎಂದರು. ‘ಮಾಯಾಕನ್ನಡಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕ್ಲ್ಯಾಪ್‌ ಮಾಡಿದ ನಟ ವಿನೋದ್‌ ಪ್ರಭಾಕರ್‌, “ಬಳಿಕ ಮಾತಿಗಿಳಿದ ವಿನೋದ್, ಧ್ರುವ ನನ್ನ ತಮ್ಮ. ನನ್ನ ಕಡೆಯಿಂದ ಕ್ಲ್ಯಾಪ್ ಮಾಡಿಸಿದ್ದಕ್ಕೆ ಧನ್ಯವಾದ. ಇಡೀ ತಂಡಕ್ಕೆ ಒಳ್ಳೆದಾಗಲಿ” ಎಂದು ಶುಭಹಾರೈಸಿದರು. “ಸಿನಿಮಾದ ಟೈಟಲ್ ಕೇಳಿದ್ರೆ, ಫೀಲ್ಡ್ ಸಿನಿಮಾ ಅನಿಸುತ್ತದೆ. ಇದು ಪ್ರಾಮಿಸಿಂಗ್ ಸಿನಿಮಾ. ಪ್ರತಿಯೊಬ್ಬರಿಗೂ ಪ್ರೋತ್ಸಾಹ ಮಾಡಬೇಕು” ಎಂದು ನೆಗೆಟಿವ್ ಕಮೆಂಟ್ ಮಾಡುವವರಿಗೆ ಎಚ್ಚರಿಕೆ ಕೊಟ್ಟರು ನಟ ಧ್ರುವ ಸರ್ಜಾ. ನಾಳೆಯಿಂದ ಚಿತ್ರೀಕರಣಕ್ಕೆ ಚಾಲನೆ ಸಿಗುತ್ತಿದ್ದು, ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಐವತ್ತು ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಕಳೆದ‌ ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯುಗಾದಿ ಹಬ್ಬದಂದು ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಆಗಿತ್ತು. ನಾಳೆಯಿಂದ ಶೂಟಿಂಗ್‌ ಶುರು. ‘ಬಾಂಡ್ ರವಿ’ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಚಿತ್ರ ನಿರ್ಮಿಸುತ್ತಿದ್ದಾರೆ. ಈ‌ ಹಿಂದೆ ಅವರು ‘ಮಾದ ಮಾನಸಿ’ ಸಿನಿಮಾ ನಿರ್ಮಾಣ ಮಾಡಿದ್ದರು. ಮಲ್ಲಿಕಾರ್ಜುನ್ ಕಾಶಿ, ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕೆ ಇರಲಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಗೀತೆಗಳನ್ನು ರಚಿಸಿದ್ದಾರೆ.

ra

LEAVE A REPLY

Connect with

Please enter your comment!
Please enter your name here