ಜಗ್ಗೇಶ್‌ ಮತ್ತು ಅದಿತಿ ಪ್ರಭುದೇವ ಜೋಡಿಯ ‘ತೋತಾಪುರಿ’ ಸಾಂಗ್‌ ಟೀಸರ್‌ ರಿಲೀಸ್‌ ಆಗಿದೆ. ವಿಜಯಪ್ರಸಾದ್‌ ನಿರ್ದೇಶನದ ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ ಎನ್ನುವುದು ವಿಶೇಷ.

ವಿಜಯಪ್ರಸಾದ್‌ ಮತ್ತು ಜಗ್ಗೇಶ್‌ ಜೋಡಿಯ ‘ನೀರ್‌ದೋಸೆ’ ಸಿನಿಮಾ ವಿಶಿಷ್ಟ ಕತೆ ಮತ್ತು ನಿರೂಪಣೆಯೊಂದಿಗೆ ಗಮನ ಸೆಳೆದಿತ್ತು. ಈ ಜೋಡಿ ಈಗ ‘ತೋತಾಪುರಿ’ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಕೋವಿಡ್‌ನಿಂದಾಗಿ ವಿಳಂಬವಾಗಿರುವ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ. ಇತ್ತೀಚೆಗೆ ನಿರ್ದೇಶಕ ವಿಜಯಪ್ರಸಾದ್‌ ಚಿತ್ರದ ಒಂದೊಂದೇ ಪಾತ್ರಗಳನ್ನು ತಮ್ಮದೇ ಶೈಲಿಯ ಒನ್‌ಲೈನರ್‌ಗಳೊಂದಿಗೆ ಪರಿಚಯಿಸಿದ್ದರು. ಈಗ ಚಿತ್ರದ ಸಾಂಗ್‌ ಟೀಸರ್‌ ಬಿಡುಗಡೆಯಾಗಿದೆ. ‘ತೋತಾಪುರಿ ಸಣ್ಣ ಖುಷಿ, ಒಳಗಿದೆ ಊರಬ್ಬ… ನಗಿಸೋದು ನನ್ನ ಧರ್ಮ, ಹರಸಿ ಹಾರೈಸಿ’ ಎನ್ನುವ ಒಕ್ಕಣಿಯೊಂದಿಗೆ ನಟ ಜಗ್ಗೇಶ್‌ ಟೀಸರ್‌ ವೀಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.

‘ತೊಟ್ಟು ಬೊಟ್ಟಿನ ಮೊದಲ ನೋಟ, ಮೊದಲ ಮಾತು!’ ಎನ್ನುವ ಉಪಶಿರ್ಷಿಕೆಯೊಂದಿಗೆ ಈ ಸಾಂಗ್‌ ಟೀಸರ್‌ ಬಿಡುಗಡೆಯಾಗಿದೆ. ಜಗ್ಗೇಶ್‌ ಮತ್ತು ಅದಿತಿ ಪ್ರಭುದೇವ ಜೋಡಿಯ ಸಾಂಗ್‌ ಗೀತರಚನೆ ಮತ್ತು ಅನೂಪ್‌ ಸಿಳೀನ್‌ ಸಂಗೀತದೊಂದಿಗೆ ಮತ್ತೆ ಮತ್ತೆ ನೋಡಿಸಿಕೊಳ್ಳುವ ಗುಣ ಹೊಂದಿದೆ. ಇನ್ನು ಈ ಚಿತ್ರಕ್ಕೊಂದು ವಿಶೇಷತೆಯೂ ಸೇರ್ಪಡೆಯಾಗಲಿದೆ. ಅದು ಭಾರತದ ಮೊದಲ ಪ್ಯಾನ್‌ ಇಂಡಿಯಾ ಹಾಸ್ಯ ಚಿತ್ರವಾಗಲಿದೆ ಎನ್ನುವುದು! ಇತ್ತೀಚೆಗೆ ಬಿಡುಗಡೆಯಾದ ಪಾತ್ರ ಪರಿಚಯದ ಪೋಸ್ಟರ್‌ಗಳಲ್ಲೇ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸೂಚನೆ ನೀಡಲಾಗಿತ್ತು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸುಮನ್‌ ರಂಗನಾಥ್‌, ಧನಂಜಯ, ದತ್ತಣ್ಣ, ವೀಣಾ ಸುಂದರ್‌ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here