ದಕ್ಷಿಣ ಭಾರತದ ಹೀರೋಗಳು ಮತ್ತು ಇಲ್ಲಿನ ಸಿನಿಮಾ ಕಂಟೆಂಟ್‌ ಬಗ್ಗೆ ಬಾಲಿವುಡ್‌ ನಟಿ ಕಂಗನಾ ಮೆಚ್ಚಿ ಮಾತನಾಡಿದ್ದಾರೆ. ಉತ್ತರ ಭಾರತದಲ್ಲೇಕೆ ದಕ್ಷಿಣದ ಹೀರೋಗಳನ್ನು ಮೆಚ್ಚುತ್ತಾರೆ ಎನ್ನುವುದಕ್ಕೆ ಅವರದ್ದೇ ಆದ ವ್ಯಾಖ್ಯಾನವೂ ಇದೆ.

ಬಾಲಿವುಡ್‌ ನಟಿ ಕಂಗನಾ ರನಾವತ್‌ ಆಗಿಂದಾಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿ ಅವರು ದಕ್ಷಿಣ ಭಾರತದ ಸಿನಿಮಾ ಮತ್ತು ಇಲ್ಲಿನ ಹೀರೋಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿಂದಿನ ‘ಕೆಜಿಎಫ್‌’ ಮತ್ತು ಇತ್ತೀಚಿನ ‘ಪುಷ್ಪ’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ತಮ್ಮ ಫೋಟೊ ಬ್ಲಾಗಿಂಗ್‌ ಸೈಟ್‌ನಲ್ಲಿ ಅವರು ದಕ್ಷಿಣದ ಹೀರೋಗಳ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ ಬಾಲಿವುಡ್‌ನ ಭ್ರಷ್ಟತನದಿಂದ ದೂರವಿರುವಂತೆ ಸಲಹೆ ಮಾಡಿದ್ದಾರೆ.

ದಕ್ಷಿಣದ ಭಾರತದ ಹೀರೋಗಳು ಉತ್ತರದ ಜನರಿಗೆ ಇಷ್ಟವಾಗುತ್ತಿರುವುದು ಏಕೆ? ಇದಕ್ಕೆ ಕಂಗನಾ ಮೂರು ಕಾರಣ ಕೊಡುತ್ತಾರೆ. 1) ಭಾರತದ ಸಂಸ್ಕೃತಿಯ ಬಗ್ಗೆ ದಕ್ಷಿಣದವರಿಗೆ ಆಳವಾದ ಅರಿವಿದೆ 2) ಅವರು ಕುಟುಂಬದವರನ್ನು ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ, ಸಂಪ್ರದಾಯವಾದಿಗಳಾದ ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಕೊಂಚ ದೂರವೇ ಇದ್ದಾರೆ. 3) ಅವರ ವೃತ್ತಿಪರತೆ ಮತ್ತು ಸಿನಿಮಾ ಕುರಿತಾದ ಪ್ಯಾಷನ್‌. ತಮ್ಮ ಪೋಸ್ಟ್‌ನಲ್ಲಿ ಅವರು ‘ಪುಷ್ಪ’ ಚಿತ್ರದಲ್ಲಿನ ನಟಿ ಸಮಂತಾರ ‘ಊ ಅಂಟಾವಾ’ ಹಾಡನ್ನು ಸಹ ಪೋಸ್ಟ್‌ ಮಾಡಿದ್ದಾರೆ. ಕಂಗನಾರ ಈ ಪೋಸ್ಟ್‌ ಕುರಿತಂತೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Previous article‘ತೋತಾಪುರಿ’ ಸಾಂಗ್‌ ಟೀಸರ್‌ ಬಿಡುಗಡೆ; ಜಗ್ಗೇಶ್‌ – ವಿಜಯಪ್ರಸಾದ್‌ ಸಿನಿಮಾ
Next articleವಿಕ್ರಂ – ಧ್ರುವ ‘ಮಹಾನ್‌’ ಪ್ರೈಮ್‌ನಲ್ಲಿ ಫೆ.10ಕ್ಕೆ; ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here