ಮೊನ್ನೆ ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ ಮತ್ತು ಕತ್ರಿಕಾ ಕೈಫ್ ಇಂದು ಮದುವೆ ಸಂಭ್ರಮದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಹಿತೈಷಿಗಳು, ಅಭಿಮಾನಿಗಳಿಂದ ಈ ಫೋಟೊಗಳಿಗೆ ಭರಪೂರ ಹಾರ್ಟ್ ಎಮೋಜಿಗಳು ಸಿಕ್ಕಿವೆ.
ನೂತನ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಅರಿಶಿಣ ಕಾರ್ಯಕ್ರಮ (ಹಲ್ದಿ ಸೆರಮನಿ) ಹಾಗೂ ಇತರೆ ಕಾರ್ಯಕ್ರಮಗಳ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “Shukr. Sabr. Khushi. 💛” ಎನ್ನುವ ಕಾಮೆಂಟ್‌ನೊಂದಿಗೆ ಇಬ್ಬರೂ ಕಲರ್‌ಫುಲ್ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೋಟೊಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಕ್ಕಿ ಅವರ ತಂದೆ ಶ್ಯಾಂ ಕೌಶಲ್, ಸಹೋದರ ಸನ್ನಿ ಕೌಶಲ್ ಅವರೂ ಫೋಟೊಗಳಲ್ಲಿ ಸೆರೆಯಾಗಿದ್ದಾರೆ. ತಾರೆಯರ ಅಭಿಮಾನಿಗಳು ಫೋಟೊಗಳಿಗೆ ಹಾರ್ಟ್ ಎಮೊಜಿಗಳನ್ನು ಹಾಕಿ ಮೆಚ್ಚಿ ಕಾಮೆಂಟಿಸಿದ್ದಾರೆ. ‘ಉರಿ’ ಹಿಂದಿ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಿದ್ದ ನಟಿ ಅಮೃತಾ ಖನ್ವಿಲ್ಕರ್, ನಟಿ ಸಾನ್ಯಾ ಮಲ್ಹೋತ್ರಾ ಸೇರಿದಂತೆ ಬಾಲಿವುಡ್‌ನ ಕೆಲವರು ಮೆಚ್ಚುಗೆಯ ಸಂದೇಶಗಳೊಂದಿಗೆ ವಿಕ್ಕಿ ಮತ್ತು ಕತ್ರಿನಾರಿಗೆ ಶುಭಾಶಯ ಕೋರಿದ್ದಾರೆ.
ಮೊನ್ನೆ ಮದುವೆ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವಿಕ್ಕಿ ಮತ್ತು ಕತ್ರಿನಾ ಮದುವೆಯ ಫೋಟೊ ಹಾಕಿ, “ಈ ಅಪರೂಪದ ಕ್ಷಣದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಹೊರತಾಗಿ ನಮ್ಮ ಹೃದಯದಲ್ಲಿ ಮತ್ಯಾವ ಭಾವವೂ ಇಲ್ಲ. ಇಂದಿನಿಂದ ನಮ್ಮ ಬದುಕಿನ ಹೊಸ ಪಯಣ ಆರಂಭವಾಗಿದೆ. ನಿಮ್ಮ ಪ್ರೀತಿ, ಹಾರೈಕೆ ಇರಲಿ” ಎಂದು ಮೆಸೇಜ್ ಹಾಕಿದ್ದರು. ರಾಜಸ್ಥಾನದಲ್ಲಿ ಅದ್ಧೂರಿ ಮದುವೆ ಮುಗಿಸಿಕೊಂಡು ಇಬ್ಬರು ಇದೀಗ ಮುಂಬಯಿಗೆ ಹಿಂತಿರುಗಿದ್ದಾರೆ. ಮತ್ತು ತಮ್ಮ ಆತ್ಮೀಯರಿಗೆ ಈ ಅವರು ಗಿಫ್ಟ್ ಹ್ಯಾಂಪರ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ. ನಟ ರೋನಿತ್ ರಾಯ್ ಗಿಫ್ಟ್ ಹ್ಯಾಂಪರ್ ಫೋಟೊ ಹಾಕಿ ನವದಂಪತಿಗೆ ಶುಭಹಾರೈಸಿದ್ದಾರೆ.