ಸುದೀಪ್‌ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್‌ ರೋಣ’ ಸಿನಿಮಾದ ಟೀಸರ್‌ ಏಪ್ರಿಲ್‌ 2ರಂದು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಸಿಂಬು, ಮಲಯಾಳಂ ಭಾಷೆಯ ಟೀಸರನ್ನು ನಟ ಮೋಹನ್‌ ಲಾಲ್‌ ರಿಲೀಸ್‌ ಮಾಡಲಿರುವ ಮಾಹಿತಿಯನ್ನು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಸುದೀಪ್ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುವ ವಿಶೇಷ ಟೀಸರ್ ಏಪ್ರಿಲ್ 2ರಂದು ರಿಲೀಸ್ ಆಗುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಂಬಿನೇಶನ್‌ನಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ 3ಡಿ ಆ್ಯಕ್ಷನ್ ಅಡ್ವೆಂಚರ್‌, ಮಿಸ್ಟ್ರಿ ಥ್ರಿಲ್ಲರ್ ಚಿತ್ರವಿದು. ‘ವಿಕ್ರಾಂತ್ ರೋಣ’ ಅಪ್‌ಡೇಟ್ಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂದು ಸಿಹಿಯಾದ ಮಾಹಿತಿ ದೊರೆಯಲಿದೆ. ಸುದೀಪ್‌ ಈ ಕುರಿತು ಟ್ವೀಟ್‌ ಮಾಡಿದ್ದಾರೆ. ನಿರ್ದೇಶಕ ಅನೂಪ್‌ ಭಂಡಾರಿ, “ಅನೌನ್ಸಿಂಗ್ ದಿ ಅರೈವಲ್ ಆಫ್ ದಿ ಡೆವಿಲ್” ಎಂದಿರುವ ಅನೂಪ್, ವಿಕ್ರಾಂತ್ ರೋಣ ಸಿನಿಮಾದ ವಿಶೇಷ ಟೀಸರ್ ಏಪ್ರಿಲ್ 2ರಂದು ಬೆ 9:55ಕ್ಕೆ ರಿಲೀಸ್ ಆಗುತ್ತಿದೆ ಎಂದು ತಿಳಿಸಿದ್ದಾರೆ.

‘ವಿಕ್ರಾಂತ್ ರೋಣ’ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಇಂಗ್ಲೀಷ್, ಅರೇಬಿಕ್, ಜರ್ಮನ್, ರಷಿಯನ್, ಮ್ಯಾಂಡರಿನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರದಲ್ಲಿ ಕಿಚ್ಚನ ಸಾಹಸವನ್ನು 3ಡಿಯಲ್ಲಿ ನೋಡಬಹುದಾಗಿದೆ. ಝೀ ಸ್ಟುಡಿಯೋ ಅರ್ಪಿಸುತ್ತಿರುವ ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜು ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ಚಿತ್ರದ ಇತರೆ ಪ್ರಮುಖ ತಾರೆಯರು.

LEAVE A REPLY

Connect with

Please enter your comment!
Please enter your name here