‘ಮಾಧ್ಯಮ ಅನೇಕ’ ಸಂಸ್ಥೆಯ Aneka Audio ರೂಪಿಸಿರುವ ‘Vote ನಮ್ಮ Power’ ಕುರಿತ ಕಾರ್ಯಕ್ರಮ ನಿನ್ನೆ (ಏಪ್ರಿಲ್‌ 22) ಆಯೋಜನೆಗೊಂಡಿತ್ತು. ಹಾಡಿನ ಭಾಗವಾಗಿರುವ ರಾಕೇಶ್‌ ಅಡಿಗ, ರಾಜ್‌ ಗೋಪಿ, ನೀತೂ ವನಜಾಕ್ಷಿ, ತೇಜಸ್ವಿನಿ ಶರ್ಮ, ಅನನ್ಯ ಅಮರ್‌ ಮತ್ತು smile guru ರಕ್ಷಿತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ‘Vote ನಮ್ಮ Power’ ಸಾಂಗ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಕಾನ್ಸೆಪ್ಟ್‌ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆ ‘Vote ನಮ್ಮ Power’ Rap ಸಾಂಗ್‌ ಅನ್ನು ಪ್ರಸ್ತುತಪಡಿಸುತ್ತಿದೆ. ಭವ್ಯ ಭಾರತದ ಭವಿಷ್ಯ ನಿರ್ಧರಿಸಲು ಮತದಾನ ಎಷ್ಟು ಮುಖ್ಯ ಹಾಗೂ ಅದರ ಮಹತ್ವವನ್ನು ವಿವರಿಸುವ ಹಾಡು ಇದಾಗಿದೆ. ಮತದಾನದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವ ಸದ್ದುದ್ದೇಶ ‘ಮಾಧ್ಯಮ ಅನೇಕ’ ಸಂಸ್ಥೆಯದು. ಆ ನಿಟ್ಟಿನಲ್ಲಿ ‘vote ನಮ್ಮ power’ ಹಾಡು ಮೂಡಿಬಂದಿದೆ. ನಿನ್ನೆ ಈ RAP song ಕುರಿತ ಪತ್ರಿಕಾಗೋಷ್ಠಿ ನಡೆಯಿತು.

ಆರಂಭದಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆಯ ಡಾ ನಮನ ಬಿ ಎನ್‌ ಅವರು ‘Vote ನಮ್ಮ Power’ ಹಾಡಿನ ಉದ್ದೇಶ, ಆಶಯದ ಬಗ್ಗೆ ವಿವರವಾಗಿ ಮಾತನಾಡಿದರು. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಚುನಾವಣೆ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮ ಅನೇಕ ಸಂಸ್ಥೆಯ ಸಂಸ್ಥಾಪಕರಾದ ಅರವಿಂದ್‌ ಮೋತಿ ಹಾಗೂ ಅನು ಮೋತಿ ಅವರು ಆಯ್ಕೆ ಮಾಡಿಕೊಂಡ ವಿಧಾನ Rap Song. ಮಾತುಗಳಿಂದ ತಲುಪಿಸಲಾಗದ ವಿಷಯವನ್ನು ಸಂಗೀತದ ಮೂಲಕ ಪರಿಣಾಮಕಾರಿಯಾಗಿ ದೊಡ್ಡ ಮಟ್ಟದಲ್ಲಿ ಎಂಥಾ ಸೂಕ್ಷ್ಮ ವಿಚಾರವನ್ನಾದರೂ ತಲುಪಿಸಬಹುದು. ಈ ಕಾರಣದಿಂದಲೇ ಮಾಧ್ಯಮ ಅನೇಕ ಸಂಸ್ಥೆ Vote ನಮ್ಮ Power ಹಾಡನ್ನು ಪ್ರಸ್ತುತಪಡಿಸುತ್ತಿದೆ’ ಎಂದರು.

‘Vote ನಮ್ಮ Power’ಗೆ ದನಿಯಾಗಿ ಹಾಡಿಗೆ ಬಲ ತುಂಬಿರುವ ನಟ ರಾಕೇಶ್‌ ಅಡಿಗ ಮಾತನಾಡಿ, ‘Rap song ಎಂದಾಕ್ಷಣ ಯೂತ್‌ಫುಲ್ಲಾಗಿರಬೇಕು. ಈ ಮಾತು ಈ ಹಾಡಿಗೆ ತುಂಬಾ ಒಪ್ಪುವಂತಿದೆ. ಮೊದಲ ಬಾರಿಗೆ ಮತದಾನ ಮಾಡುವವರಿಗೆ ಈ Rap song ಬಹಳ ಇಷ್ಟವಾಗಬಹುದು. ಈಗಿನ ಪರಿಸ್ಥಿತಿಯಲ್ಲಿ ತುಂಬಾ ಹಾಡುಗಳು ಬರುತ್ತಿವೆ. ಆದರೆ, ಜನರಿಗೆ ತಿಳಿವಳಿಕೆ ಹಾಗೂ ಮಾಹಿತಿ ಕೊಡುವ ಸಾಹಿತ್ಯ ಇರುವ ಹಾಡು ಬಂದಾಗ ಖುಷಿಯಾಗುತ್ತದೆ. ಈಗ ಅಂತಹದ್ದೇ ಹಾಡಿನ ಭಾಗ ಆಗಿರದು ನನಗೆ ಖುಷಿ ಕೊಟ್ಟಿದೆ. ಹಾಡಿನ ಮೂಲಕ ಹೇಳಲು ಹೊರಟಿರುವ ವಿಷಯ ತುಂಬಾ ಚಿಕ್ಕದು ಅಂತ ಅನಿಸಬಹುದು. ಆದರೆ, ಅದರ ಮಹತ್ವ ಅರ್ಥ ಆಗಬೇಕು ಜನರಿಗೆ. ಮಾಧ್ಯಮ ಅನೇಕ ತಂಡ ಕ್ರಿಯಾತ್ಮಕ ಹಾಗೂ ಪ್ರೊಫೆಷನಲ್‌ ತಂಡ. ಅವರಿಗೆ ಈ ಹಿಂದೆಯೂ ಸಂದರ್ಶನವೊಂದನ್ನು ಕೊಟ್ಟಿದ್ದೇನೆ. ಅವರ ಜೊತೆ ಕೆಲ ಮಾಡಿರೋದು ಖುಷಿ ಕೊಟ್ಟಿದೆ’ ಎಂದರು.

ಮಾಧ್ಯಮ ಅನೇಕ ಸಂಸ್ಥೆಯ ವೆಬ್‌ ಸರಣಿ ನಿರ್ದೇಶಕ ರಾಜ್‌ ಗೋಪಿ ನಿರ್ದೇಶನದಲ್ಲಿ ಸಿದ್ಧವಾಗಿರುವ ಹಾಡಿದು. ಈ ವಿಶೇಷ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ ಅವರು, ‘Rap song ಎಂದರೆ ಅದು ಒಂದು ಯೂತ್‌ಫುಲ್‌ನೆಸ್‌. ಚುನಾವಣೆ ಬಗ್ಗೆ ಒಂದು ಹಾಡು ಮಾಡಲು ಹೊರಟಾಗ ನಮ್ಮ ಟಾರ್ಗೆಟ್‌ ಇದ್ದದ್ದು ದೇಶದ ಯುವಜನತೆ. ದೇಶ ಕಟ್ಟುವ ಜವಾಬ್ದಾರಿಯನ್ನು ಯುವಜನತೆ ತೆಗೆದುಕೊಂಡರೆ, ಕನಸುಗಳು ಸಾಕಾರವಾಗುತ್ತವೆ. ಹೀಗಾಗಿಯೇ Rap song ಆಯ್ಕೆ ಮಾಡಿಕೊಂಡೆವು. ಸಂವಿಧಾನದಲ್ಲಿರುವ ಕೆಲವು ಪದಗಳನ್ನೇ ಈ ಹಾಡಿನಲ್ಲಿ ಬಳಸಿಕೊಂಡಿದ್ದೇವೆ. ಇನ್ನು ಎಲ್ಲ ಯುವಜನತೆ ತಮ್ಮ ತಮ್ಮ ಮತಗಳನ್ನು ಜವಾಬ್ದಾರಿಯಿಂದ ಚಲಾಯಿಸಲು ಅನ್ನೋದೇ ನಮ್ಮ ಹಾಡಿನ ಮುಖ್ಯ ಉದ್ದೇಶ. ಮತದಾನ ಮಾಡೋದು ಹಕ್ಕಲ್ಲ. ಅದು ಅಧಿಕಾರ. ಆ ಅಧಿಕಾರವನ್ನು ಎಲ್ಲರೂ ಚಲಾಯಿಸಬೇಕು. ಇನ್ನು ಹಾಡಿಗೆ ಬೇಕಿದ್ದ ಎನರ್ಜಿ ತುಂಬಿದ್ದು ಗಾಯಕ ರಾಕೇಶ್‌ ಅಡಿಗ. ಈಗಿನ ಯುವಜನತೆ ಹೆಚ್ಚಾಗಿ Rap songಗೆ ಅಭಿಮಾನಿಗಳು. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ನಿರ್ದೇಶಕ ರಾಜ್ ಗೋಪಿ ತಿಳಿಸಿದರು.

‘ಬಿಗ್‌ಬಾಸ್‌’ ಖ್ಯಾತಿಯ ನಟಿ ನೀತೂ ವನಜಾಕ್ಷಿ ಅವರೀಗ ಮತದಾನ ಜಾಗೃತಿ ಅಧಿಕೃತ ರಾಯಭಾರಿ. ಅವರು ಕೂಡ ‘Vote ನಮ್ಮ Power’ಗೆ ಹೆಜ್ಜೆ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರು ಮಾತನಾಡಿ, ‘ಮತದಾನದ ದಿನ‌ ರಜೆ ಇದೆ ಎಂದು ಮನೆಯಲ್ಲಿ ಕೂರುವುದು. ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಒಂದು ವೋಟ್‌ನಿಂದ ಏನಾಗುತ್ತೆ ಬಿಡಿ ಅಂತ ಅಸಡ್ಡೆ ಮಾಡಬೇಡಿ. ಹನಿಹನಿ ಗೂಡಿದರೆ ಹಳ್ಳ. ಪ್ರತಿ ಮತಕ್ಕೂ ಮಹತ್ವ ಇದೆ. ಒಂದೊಳ್ಳೆ ಸಮಾಜ ನಿರ್ಮಾಣಕ್ಕೆ ಮತದಾನ ನಾಂದಿ ಹಾಡುತ್ತೆ. ಈ ಹಾಡು ಮತದಾರರಿಗೆ ತಲೆ ಮೇಲೆ ಹೊಡೆದು ಮತದಾನ ಮಾಡಿ ಅಂತ ಹೇಳುವ ರೀತಿ ಇದೆ. ಎಲ್ಲ ವಯಸ್ಸಿನವರನ್ನೂ ಈ ಹಾಡು ಸುಲಭವಾಗಿ ತಲುಪುವಂತಿದೆ. ಎಲ್ಲರೂ ಮತದಾನ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕಲ್ಲ.‌ ಅಧಿಕಾರ’ ಎಂದರು.

ಸ್ಯಾಂಡಲ್‌ವುಡ್‌ ನಟಿ ತೇಜಸ್ವಿನಿ ಶರ್ಮ ಅವರು ‘Vote ನಮ್ಮ Power’ ಭಾಗವಾಗಿದ್ದಾರೆ. ‘ಮಾಧ್ಯಮ ಅನೇಕ’ ಸಂಸ್ಥೆ ಜೊತೆ ಅವರದು ಮೂರ್ನಾಲ್ಕು ವರ್ಷಗಳ ನಂಟು. ‘ಮಾಧ್ಯಮ ಅನೇಕ’ದ ‘ಸೂಪರ್‌ ಕಪಲ್‌’ ವೆಬ್‌ ಸರಣಿಯಲ್ಲಿ ಅವರು ನಟಿಸಿದ್ದಾರೆ. ತೇಜಸ್ವಿನಿ ಅವರು ಮಾತನಾಡಿ, ‘ಮಾಧ್ಯಮ ಅನೇಕ ಸಂಸ್ಥೆ ಜೊತೆ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸೂಪರ್‌ ಕಪಲ್‌ ಸೀರೀಸ್‌ನಿಂದ ಇದು ಆರಂಭವಾಗಿದ್ದು. Rap song ಮಾಡುವಾಗಲೂ ಸಹ ಅರವಿಂದ್‌ ಸರ್‌ ಸಾಮಾಜಿಕ ಕಳಕಳಿಯಿಂದ ಜಾಗೃತಿ ಮೂಡಿಸಲು ಮಾಡುತ್ತಿರುವ ಹಾಡಿನ ಭಾಗವಾಗುತ್ತೀರಾ? ಎಂದು ಕೇಳಿದರು. ಆಗ ಈ ಸದುದ್ದೇಶದ ಭಾಗವಾಗಲು ಖುಷಿಯಿಂದ ಒಪ್ಪಿದೆ. ಒಳ್ಳೆಯ ಸಮಾಜ ಕಟ್ಟಲು ಯುವಜನತೆಯನ್ನು ಪ್ರೇರೇಪಿಸುವ ಈ ಕೆಲಸದಲ್ಲಿ ನಾನೂ ಭಾಗಿಯಾಗಿದ್ದಕ್ಕೆ ಖುಷಿ ಇದೆ’ ಎಂದರು.

ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮಾತನಾಡಿ, ಮೊದಲ ಸಲ ಮತದಾನ ಮಾಡಿದಾಗ ಆಗಿದ್ದ ಅನುಭವ. ಆ ಜವಾಬ್ಧಾರಿಗೆ ಇರುವ ಗಂಭೀರತೆ ಅರ್ಥವಾಗಿತ್ತು. ಮಾಧ್ಯಮ ಅನೇಕದ ಭಾವಾಗಿರೋದಕ್ಕೆ ಹೆಮ್ಮೆ ಇದೆ. ಜೊತೆಗೆ ನನ್ನ ದೊಡ್ಡ ಕನಸಾಗಿದ್ದ ಕೊರಿಯೋಗ್ರಫಿ ಮಾಡಲು ಅವಕಾಶ ಕೊಟ್ಟ ಸಂಸ್ಥೆಗೆ ನಿಜಕ್ಕೂ ದೊಡ್ಡ ಥ್ಯಾಂಕ್ಸ್‌. ಒಂದು Rap song ನಿಂದ ಎಷ್ಟು ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿದೆ ಅಂದರೆ, ಈ ಹಾಡನ್ನು ಪ್ರತಿ ಚುನಾವಣೆಯಲ್ಲೂ ಕೇಳಬಹುದು. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಳಸಿಕೊಳ್ಳಬಹುದು’ ಎಂದು ಈ ಸಾಂಗ್‌ ರೂಪಿಸಿದ ಸಂಸ್ಥೆಯ ಅರವಿಂದ್‌ ಸರ್‌ ಹಾಗೂ ಅನು ಮೇಡಂ ಅವರಿಗೆ ಧನ್ಯವಾದ ಹೇಳಿದರು. ‘ಈ ಹಾಡಿಗೆ ಹೆಜ್ಜೆ ಹಾಕುವ ಮೊದಲು ಅದರ ಸಾಹಿತ್ಯ ಕಲಿಯೋಕೆ ತುಂಬಾ ಸಮಯ ತೆಗೆದುಕೊಂಡೆ. ಅನನ್ಯಾ ಅವರು ಹಳೇ ಪರಿಚಯ. ಅವರು ಹೇಳಿಕೊಟ್ಟ ಸ್ಟೆಪ್ಸ್‌ ಕಲಿತು ಮಾಡಿದ್ದೇನೆ. ಹಾಡು ತುಂಬಾ ಚೆನ್ನಾಗಿ ಎಲ್ಲರೂ ನೋಡಿ’ ಎಂದಿರು ನಟ ಸ್ಮೈಲ್ ಗುರು ರಕ್ಷಿತ್.

‘ಮಾಧ್ಯಮ ಅನೇಕ’ ಸಂಸ್ಥೆಯ ‘ಅನೇಕ ಆಡಿಯೋ’ ಮೂಲಕ ಈ Rap song ಬಿಡುಗಡೆಯಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ಅರವಿಂದ್ ಮೋತಿ ಈ ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅನು ಮೋತಿ ಬರೆದು, ಕಾರ್ತಿಕ್ ಶರ್ಮ ಸಂಗೀತ ನೀಡಿರುವ ಈ ಹಾಡನ್ನು ರಾಕೇಶ್ ಅಡಿಗ ಹಾಗೂ ಐಶ್ವರ್ಯ ರಂಗಾರಾಜನ್ ಹಾಡಿದ್ದಾರೆ. ಛಾಯಾಗ್ರಾಹಣ ಗಿರೀಶ್ ಅವರದು. ಪ್ರತಿಭಾವಂತ ಯುವ ತಾರೆಯರಾದ ತೇಜಸ್ವಿನಿ ಶರ್ಮ, smile guru ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ಅಮರ್‌ ತಮ್ಮ energetic dance stepಗಳೊಂದಿಗೆ ಹಾಡನ್ನು powerful ಆಗಿ ಪ್ರಸ್ತುತಪಡಿಸಿದ್ದಾರೆ. ಇವರಷ್ಟೇ ಅಲ್ಲದೆ ಟೀವಿ – ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು hook stepsಗೆ ಹೆಜ್ಜೆ ಹಾಕುತ್ತಾ ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. ನವೀನ್‌ ಶಂಕರ್‌, ನೀತೂ ವನಜಾಕ್ಷಿ, ಕಾರ್ತೀಕ್‌ ಮಹೇಶ್‌, ತನಿಶಾ ಕುಪ್ಪಂಡ, ಸಾನಿಯಾ ಅಯ್ಯರ್‌, ಸಾಗರ್‌ ಪುರಾಣಿಕ್‌, ನಿರಂಜನ್‌ ದೇಶಪಾಂಡೆ, ಚಂದನಾ ಅನಂತಕೃಷ್ಣ ಮುಂತಾದವರು songನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡು ಸದಾಶಯದ ಈ ಯೋಜನೆಗೆ ಕೈಜೋಡಿಸಿದ್ದಾರೆ.

LEAVE A REPLY

Connect with

Please enter your comment!
Please enter your name here