ಸಾಯಿ ಸುಶಾಂತ್‌ ರೆಡ್ಡಿ, ಚೈತನ್ಯ ಕೃಷ್ಣ, ಪಾವನಿ ಗಂಗಿರೆಡ್ಡಿ ಪ್ರಮುಖ ಪಾತ್ರಗಳಲ್ಲಿರುವ ‘ವ್ಯೂಹಂ’ ತೆಲುಗು ವೆಬ್‌ ಸರಣಿ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. ಶಶಿಕಾಂತ್‌ ಶ್ರೀವೈಷ್ಣವ್‌ ಪೀಸಾಪತಿ ಸರಣಿ ನಿರ್ದೇಶಿಸಿದ್ದಾರೆ.

ಶಶಿಕಾಂತ್ ಶ್ರೀವೈಷ್ಣವ್ ಪೀಸಾಪತಿ ನಿರ್ದೇಶನದ ‘ವ್ಯೂಹಂ’ ತನಿಖಾ ಕ್ರೈಮ್‌ ಥ್ರಿಲ್ಲರ್ ತೆಲುಗು ಸರಣಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಸರಣಿಯಲ್ಲಿ ಸಾಯಿ ಸುಶಾಂತ್ ರೆಡ್ಡಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತನ್ಯ ಕೃಷ್ಣ, ಪಾವನಿ ಗಂಗಿರೆಡ್ಡಿ, ರವೀಂದ್ರ ವಿಜಯ್ ಮತ್ತು ಶಶಾಂಕ್ ಸಿದ್ದಂಶೆಟ್ಟಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯನ್ನು Annapurna Studios ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸರಣಿಯು ಒಬ್ಬ ಪೊಲೀಸ್ ಅಧಿಕಾರಿ ನ್ಯಾಯಕ್ಕಾಗಿ ಅನ್ವೇಷಿಸುವ ಕಥಾಹಂದರ ಹೊಂದಿದೆ. ಅಧಿಕಾರಿಗಳಿಗೆ ಸವಾಲು ಹಾಕಿ ದೊಡ್ಡ ತಲೆನೋವಾಗಿ ಮಾರ್ಪಡುವ ಅಪರಾಧಿಗಳನ್ನು ಹೇಗೆ ಕಂಡು ಹಿಡಿಯುತ್ತಾರೆ ಎಂಬುದನ್ನು ಈ ಸರಣಿ ತೋರಿಸಲಿದೆ. ಸರಣಿಯು ಡಿಸೆಂಬರ್ 14ರಿಂದ Amazon Primeನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here