ಸಮುದ್ರಕನಿ ರಚಿಸಿ ನಿರ್ದೇಶಿಸಿರುವ ‘Bro’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದೊಂದು ವಿಶೇಷ ಕತೆ. ನಟ ಪವನ್‌ ಕಲ್ಯಾಣ್‌ ಚಿತ್ರದಲ್ಲಿ ‘Time’ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ! ಪ್ರಿಯಾ ಪ್ರಕಾಶ್‌ ವಾರಿಯರ್‌ ಮತ್ತು ಕೇತಿಕಾ ಶರ್ಮ ಚಿತ್ರದ ನಾಯಕಿಯರು. ಇದೇ ವಾರ ಜುಲೈ 28ರಂದು ಸಿನಿಮಾ ತೆರೆಕಾಣುತ್ತಿದೆ.

ಕಳೆದ ವರ್ಷ ‘ಭೀಮ್ಲಾ ನಾಯಕ್‌’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಪವನ್‌ ಕಲ್ಯಾಣ್‌ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಈ ಬಾರಿ ಅವರೊಂದಿಗೆ ಯುವನಟ ಸಾಯಿ ಧರಮ್‌ ತೇಜ್‌ ಇದ್ದಾರೆ. ಈ ಜೋಡಿಯ ‘Bro’ ಆಕ್ಷನ್‌ – ಥ್ರಿಲ್ಲರ್‌ ತೆಲುಗು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನಟ, ನಿರ್ದೇಶಕ ಸಮುದ್ರಕನಿ ರಚಿಸಿ – ನಿರ್ದೇಶಿಸಿರುವ ಈ ಸಿನಿಮಾ ಅವರದ್ದೇ ತಮಿಳು ಚಲನಚಿತ್ರ ‘ವಿನೋದಯ ಸೀತಂ’ ಅಧಿಕೃತ ರಿಮೇಕ್. 135 ಸೆಕೆಂಡ್‌ಗಳ ಟ್ರೈಲರ್‌ ಮಾರ್ಕಾಂಡೇಯುಲು (ಸಾಯಿ ಧರಮ್‌ ತೇಜ್‌) ಬ್ಯುಸಿ ಲೈಪ್‌ಸ್ಟೈಲ್‌ ಮತ್ತು ಟೈಂ (ಪವನ್‌ ಕಲ್ಯಾಣ್‌) ಜೊತೆಗಿನ ಮುಖಾಮುಖಿಯನ್ನು ಹೇಳುತ್ತದೆ. ಪ್ರಿಯಾ ಪ್ರಕಾಶ್‌ ವಾರಿಯರ್‌, ಕೇತಿಕಾ ಶರ್ಮ, ಬ್ರಹ್ಮಾನಂದಂ, ಸುಬ್ಬರಾಜು, ವೆನ್ನಿಲ ಕಿಶೋರ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಟ್ರೈಲರ್‌ನಲ್ಲಿ ಪವನ್‌ ಕಲ್ಯಾಣ್‌ ಮತ್ತು ಸಾಯಿ ಧರಮ್‌ ಅವರ ಹಾಸ್ಯ ಸಂಭಾಷಣೆಗಳ ಜೊತೆ ಡ್ಯಾನ್ಸ್‌ ಕೂಡ ಇದೆ. ಸೂಪರ್‌ನ್ಯಾಚುರಲ್‌ ಪವರ್‌ನ ಪಾತ್ರದಲ್ಲಿ ಪವನ್‌ ಮಿಂಚಿದ್ದಾರೆ. ಸಿನಿಮಾಗೆ ತ್ರಿವಿಕ್ರಮ್ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ZEE ಸ್ಟುಡಿಯೋಸ್ ಸಹಯೋಗದೊಂದಿಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಟಿ ಜಿ ವಿಶ್ವ ಪ್ರಸಾದ್ ಮತ್ತು ವಿವೇಕ್ ಕುಚಿಬೋಟ್ಲ ಸಿನಿಮಾ ನಿರ್ಮಿಸಿದ್ದಾರೆ. ತಮನ್ ಎಸ್ ಸಂಗೀತ ಸಂಯೋಜಿಸಿದ್ದು, ಸುಜಿತ್ ವಾಸುದೇವ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನವಿದೆ. ಇದೇ ವಾರ ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

Previous articleಸೆಟ್ಟೇರಿದ ‘ವೃಷಭ’ ಸಿನಿಮಾ | ಕನ್ನಡಿಗ ನಂದಕಿಶೋರ್‌ ನಿರ್ದೇಶನದಲ್ಲಿ ಮೋಹನ್‌ ಲಾಲ್‌
Next articleThe Dealer of Death! | ‘ಜವಾನ್‌’ ಸಿನಿಮಾದ ವಿಜಯ್‌ ಸೇತುಪತಿ ಫಸ್ಟ್‌ ಲುಕ್‌

LEAVE A REPLY

Connect with

Please enter your comment!
Please enter your name here