ಲೀಗಲ್‌ ಡ್ರಾಮಾ ಸಿನಿಮಾ ‘ವೆಡ್ಡಿಂಗ್‌ ಗಿಫ್ಟ್‌’ ಆಡಿಯೋ ಬಿಡುಗಡೆಯಾಗಿದೆ. ನಿಶಾಂತ್‌ ಮತ್ತು ಸೋನು ಗೌಡ ಮುಖ್ಯಪಾತ್ರದಲ್ಲಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರೇಮಾ ಇದ್ದಾರೆ. ವಿಕ್ರಂ ಪ್ರಭು ನಿರ್ದೇಶನದ ಸಿನಿಮಾ ಜೂನ್‌ ತಿಂಗಳಲ್ಲಿ ತೆರೆಕಾಣಲಿದೆ.

ಹತ್ತೊಂಬತ್ತು ವರ್ಷಗಳ ಹಿಂದೆ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಅವರ ‘ಲವ್‌’ ಚಿತ್ರಕ್ಕೆ ವಿಕ್ರಂ ಪ್ರಭು ಸಹಾಯಕರಾಗಿ ಕೆಲಸ ಮಾಡಿದ್ದರು. ಮುಂದೆ ವ್ಯಾಪಾರ, ವ್ಯವಹಾರವೆಂದು ಅವರು ಪುಣೆಯಲ್ಲಿ ನೆಲೆಸಬೇಕಾಯ್ತು. ಸ್ಯಾಂಡಲ್‌ವುಡ್‌ನಿಂದ ದೂರವಾಗಿದ್ದರೂ ಸಿನಿಮಾದೆಡೆಗಿನ ಅವರ ಪ್ರೀತಿ ಜಾರಿಯಲ್ಲಿತ್ತು. ಇದೇ ಉಮೇದಿನಲ್ಲಿ ಅವರು ಬೆಂಗಳೂರಿಗೆ ಮರಳಿ ‘ವೆಡ್ಡಿಂಗ್‌ ಗಿಫ್ಟ್‌’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಹೆಣ್ಣುಮಕ್ಕಳ ಪರವಾಗಿ ಇರುವ ಕಾನೂನು ಹೇಗೆ ದುರುಪಯೋಗವಾಗುತ್ತದೆ ಎನ್ನುವುದು ಚಿತ್ರದ ಒನ್‌ಲೈನ್‌ ಕತೆ. ಹಿರಿಯ ನಟಿ ಪ್ರೇಮ ಅವರು ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಶಾಂತ್, ಸೋನು ಗೌಡ, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಈಗ ಆಡಿಯೋ ಬಿಡುಗಡೆಯಾಗಿದ್ದು, ಪ್ರಚಾರ ಕಾರ್ಯ ಶುರುವಾಗಿದೆ. ಜೂನ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವುದು ವಿಕ್ರಂ ಪ್ರಭು ಅವರ ಯೋಜನೆ. ಸಮಾರಂಭದಲ್ಲಿ ಮಾತನಾಡಿದ ನಟಿ ಪ್ರೇಮ, “ನಾನು ದುಡ್ಡಿಗಾಗಿ ಸಿನಿಮಾ ಮಾಡುವವಳಲ್ಲ. ಉತ್ತಮ ಕಥೆ ಇದ್ದರೆ ಮಾತ್ರ ನಟಿಸುತ್ತೇನೆ. ವಿಕ್ರಂ ಪ್ರಭು ಅವರು ಈ ಚಿತ್ರದ ಕಥೆ ಹೇಳಿದ ತಕ್ಷಣ ಒಪ್ಪಿಗೆ ಸೂಚಿಸಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಯಕನ ಪರ ವಕಾಲತ್ತು ವಹಿಸುವ ವಕೀಲೆಯಾಗಿ ಕಾಣಿಸಿಕೊಂಡಿದ್ದೇನೆ” ಎಂದು ಅವರು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಬಾಲಚಂದ್ರ ಪ್ರಭು ಸಂಗೀತ, ವಿಜೇತ್‌ ಚಂದ್ರ ಸಂಕಲನ, ಉದಯಲೀಲಾ ಛಾಯಾಗ್ರಹಣ ಚಿತ್ರಕ್ಕಿದೆ.

Previous article‘ದಾರಿ ಯಾವುದಯ್ಯ ವೈಕುಂಠಕೆ’ ಟ್ರೇಲರ್; ಸಿದ್ದು ಪೂರ್ಣಚಂದ್ರ ನಿರ್ದೇಶನದ ಸಿನಿಮಾ
Next articleಜೆರಿನ್‌ ಚಂದನ್‌ ನಿರ್ದೇಶನದಲ್ಲಿ ‘ಹೆಲ್ಪ್‌’; ಶುಭಹಾರೈಸಿದ ನಿರ್ದೇಶಕ ಸುನಿ

LEAVE A REPLY

Connect withPlease enter your comment!
Please enter your name here