ಸಿಂಧು ಗೌಡ ನಿರ್ದೇಶನದ ‘ಆಪಲ್‌ ಕಟ್‌’ ಮರ್ಡರ್‌ – ಮಿಸ್ಟರಿ ಸಿನಿಮಾದ ಟೀಸರ್‌ಗೆ ಚಿತ್ರನಿರ್ದೇಶಕ ಯೋಗರಾಜ್‌ ಭಟ್‌ ಧ್ವನಿ ನೀಡಿದ್ದಾರೆ. ಸೂರ್ಯ ಗೌಡ ಮತ್ತು ಅಶ್ವಿನಿ ಪೋಲೆಪಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ‘ಆಪಲ್‌ ಕಟ್‌’ ಸಿನಿಮಾದ ಟೀಸರ್‌ಗೆ ಚಿತ್ರನಿರ್ದೇಶಕ ಯೋಗರಾಜ್‌ ಭಟ್‌ ಧ್ವನಿ ನೀಡಿದ್ದಾರೆ. ಸಿಂಧು ಕತೆ, ಚಿತ್ರಕಥೆ ರಚಿಸಿ ನಿರ್ದೇಶನದ ಚೊಚ್ಚಲ ಚಿತ್ರವಿದು. ಇದೊಂದು ಮರ್ಡರ್‌ ಮಿಸ್ಟರಿ ಕಥಾವಸ್ತು. ಸೂರ್ಯ ಗೌಡ ಮತ್ತು ಅಶ್ವಿನಿ ಪೋಲೆಪಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ, ಬಾಲ ರಾಜವಾಡಿ ಇದ್ದಾರೆ. ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಸತ್ಯಪ್ರಕಾಶ್ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ, ಸುಚೇಂದ್ರ ಎನ್ ಮೂರ್ತಿ ಸಂಕಲನ ಚಿತ್ರಕ್ಕಿದೆ. ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಶಿಲ್ಪ ಪ್ರಸನ್ನ ಅವರು ಚಿತ್ರ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here