ರಮೇಶ್‌ ಅರವಿಂದ್‌ ಅಭಿನಯದ ನೂತನ ಸಿನಿಮಾ ‘ದೈಜಿ’ ಘೋಷಣೆಯಾಗಿದೆ. ‘ಶಿವಾಜಿ ಸುರತ್ಕಲ್’ ನಿರ್ದೇಶಿಸಿದ್ದ ಆಕಾಶ್‌ ಶ್ರೀವತ್ಸ ಸಾರಥ್ಯದಲ್ಲಿ ತಯಾರಾಗಲಿರುವ ಹಾರರ್‌ ಜಾನರ್‌ ಚಿತ್ರವಿದು. ಅಲೌಕಿಕ ಶಕ್ತಿಗಳ ಸುತ್ತ ನಡೆಯುವ ಕತೆ. ರವಿ ಕಶ್ಯಪ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

‘ಶಿವಾಜಿ ಸುರತ್ಕಲ್’ ಭಾಗ 1 & 2ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತುದ್ದಾರೆ. ಈ ಸಿನಿಮಾಗೆ ‘ದೈಜಿ’ ಎಂದು ನಾಮಕರಣವಾಗಿದೆ. ‘ದೈಜಿ’ ಎಂದರೆ ಬೇರೆ ಬೇರೆ ಭಾಷೆಗಳಲ್ಲಿ ಭಿನ್ನ ಅರ್ಥಗಳಿವೆ. ಕೊಂಕಣಿಯಲ್ಲಿ ‘ರಕ್ತ ಸಂಬಂಧ’, ಜಪಾನೀ ಭಾಷೆಯಲ್ಲಿ ‘ಬಹಳ ಕಾಳಜಿ ವಹಿಸಬೇಕಾದ ವಿಚಾರ’ ಹೀಗೆ ಹಲವು ಅರ್ಥಗಳು. ಈ ಸಿನಿಮಾದ ಪೋಸ್ಟರ್ ಬಹಳ ಭಿನ್ನವಾಗಿದೆ. ವಿಚಿತ್ರವಾಗಿ ಮೇಕಪ್ ಮೆತ್ತಿಕೊಂಡ ವ್ಯಕ್ತಿಯೊಬ್ಬನ ಅರ್ಧ ಚಿತ್ರವನ್ನು ಪೋಸ್ಟರ್​ನಲ್ಲಿ ನೀಡಲಾಗಿದೆ. ಸಿನಿಮಾದಲ್ಲಿ ರಮೇಶ್‌ ಅರವಿಂದ್‌ ಅವರು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜಾನರ್‌ ಪ್ರಕಾರಕ್ಕೆ ಸೇರುತ್ತದೆ. ಈ ಸಿನಿಮಾದ ಚಿತ್ರಕಥೆಯನ್ನು ‘ಶಿವಾಜಿ ಸುರತ್ಕಲ್’ ಕಥೆ ಬರೆದಿದ್ದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ಜೊತೆಗೂಡಿ ರಚಿಸಿದ್ದಾರೆ. ನಿರ್ಮಾಪಕ ರವಿ ಕಶ್ಯಪ್ ಹೇಳಿರುವ ನೈಜ ಘಟನೆಗಳನ್ನು ಆಧರಿಸಿದ ಕತೆ ಎನ್ನುವುದು ವಿಶೇಷ. Vibha Kashyap Productions ಬ್ಯಾನರ್ ಅಡಿ ರವಿ ಕಶ್ಯಪ್ ಚಿತ್ರ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆಕಂಡಿದ್ದ ಕಿರುಚಿತ್ರ ‘ಸುಳ್ಳೇ ಸತ್ಯ’, ಪವನ್ ಕುಮಾರ್ ಅವರ ‘ಲೂಸಿಯಾ’, ಧನಂಜಯ್ ಅವರ ‘ಬದ್ಮಾಶ್’ ಸಿನಿಮಾಗಳು ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.

LEAVE A REPLY

Connect with

Please enter your comment!
Please enter your name here