ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ‘KGF2’ ಸಿನಿಮಾದ ‘ತೂಫಾನ್‌’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ರವಿ ಬಸ್ರೂರು ಗೀತೆ ರಚಿಸಿ ಸಂಗೀತ ಸಂಯೋಜಿಸಿರುವ ಸಾಂಗ್‌ ಚಿತ್ರಕ್ಕೆ ಅಗತ್ಯವಿರುವ ಹೈಪ್‌ ಕ್ರಿಯೇಟ್‌ ಮಾಡಿದೆ.

ಯಶ್‌ ‘KGF2’ ಸಿನಿಮಾದ ‘ತೂಫಾನ್‌’ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ. ಸರಣಿಯ ಮೊದಲ ಸಿನಿಮಾದ ಅದ್ಧೂರಿ ಮತ್ತು ಸ್ಟೈಲಿಶ್‌ ಮೇಕಿಂಗ್‌ ಇಲ್ಲಿಯೂ ಮುಂದುವರೆದಿರುವ ಸ್ಪಷ್ಟ ಸೂಚನೆ ಹಾಡಿನಲ್ಲಿ ಕಾಣಿಸುತ್ತದೆ. ಫಸ್ಟ್‌ ಪಾರ್ಟ್‌ನಲ್ಲಿ ಮದರ್‌ ಸೆಂಟಿಮೆಂಟ್‌ ಇತ್ತು. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇರುವಂತಿದೆ. ಕನ್ನಡ ಮತ್ತು ಹಿಂದಿ ಪದಗಳ ಜೋಡಣೆಯ ಗೀತೆಗೆ ಹತ್ತಾರು ಗಾಯಕರ ದನಿಯಿದೆ. ಸಂತೋಷ್‌ ವೆಂಕಿ, ಮೋಹನ್‌ ಕೃಷ್ಣ, ಸಚಿನ್‌ ಬಸ್ರೂರು, ರವಿ ಬಸ್ರೂರು, ಪುನೀತ್‌ ರುದ್ರನಾಗ್‌, ವರ್ಷಾ ಆಚಾರ್ಯ ಜೊತೆ ಮಕ್ಕಳೂ ಹಾಡಿದ್ದಾರೆ. ಲಹರಿ ಮತ್ತು T ಸೀರೀಸ್‌ನಲ್ಲಿ ಲಿರಿಕಲ್‌ ಸಾಂಗ್‌ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಯಶ್‌ ಅಭಿಮಾನಿಗಳು ಈ ಲಿರಿಕಲ್‌ ಸಾಂಗ್‌ ಅನ್ನು ಮೆಚ್ಚಿ ತಲೆದೂಗಿದ್ದಾರೆ. ಮತ್ತೊಂದೆಡೆ ಒಂದು ವರ್ಗದ ಸಿನಿಪ್ರೇಮಿಗಳಿಗೆ ಹಾಡು ಅಷ್ಟಾಗಿ ಇಂಪ್ಯಾಕ್ಟ್‌ ಮಾಡಿಲ್ಲ. “ಮೊದಲ ಪಾರ್ಟ್‌ನಲ್ಲಿನ ‘ಸಲಾಂ ರಾಕಿ ಭಾಯ್‌’ ಸಾಂಗ್‌ಗೆ ಹೋಲಿಸಿದರೆ ಇದು ಡಲ್‌ ಆಗಿದೆ. ಅಬ್ಬರದ ಸಂಗೀತದಲ್ಲಿ ಹಾಡಿನ ಸಾಲುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಸಂಗೀತದಲ್ಲಿ ಎಂದಿನ ಮಾಸ್‌ ಟೋನ್‌ ಹೊರತಾಗಿ ಇತರೆ ಪ್ರಯೋಗ ಬೇಕಿತ್ತು. ಚಿತ್ರದ ಇತರೆ ಹಾಡುಗಳ ಬಗ್ಗೆ ಕುತೂಹಲವಿದೆ” ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ಮಾರ್ಚ್‌ 27ರಂದು ಚಿತ್ರದ ಟ್ರೈಲರ್‌ ಹೊರಬರಲಿದ್ದು ಏಪ್ರಿಲ್‌ 14ರಂದು ಸಿನಿಮಾ ತೆರೆಕಾಣಲಿದೆ.

Previous article‘RRR’ ಅದ್ಧೂರಿ ಪ್ರೀ-ರಿಲೀಸ್‌ ಇವೆಂಟ್‌; 25ಕ್ಕೆ ಸಿನಿಮಾ ತೆರೆಗೆ
Next articleನಾನಿ ‘ದಸರಾ’ ಫಸ್ಟ್‌ ಲುಕ್‌, Spark of #Dasara

LEAVE A REPLY

Connect with

Please enter your comment!
Please enter your name here