ಸಂತೋಷ್‌ ಬಾಗಲಕೋಟಿ ನಿರ್ದೇಶನದ ‘ಒಂದು ಸನ್ನೆ ಒಂದು ಮಾತು’ ಚಿತ್ರದೊಂದಿಗೆ ಯಶಸ್ವಿನಿ ನಾಚಪ್ಪ ಹಿರೋಯಿನ್‌ ಆಗಿದ್ದಾರೆ. ಈ ಹಿಂದೆ ಅವರು ಹಲವು ಸಿನಿಮಾ ತಂಡಗಳ ನಿರ್ದೇಶನದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಹಿಟ್ ಸಿನಿಮಾ ‘ಮುಗುಳುನಗೆ’ಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಯಶಸ್ವಿನಿ ನಾಚಪ್ಪ ನಟಿಯಾಗಿ ಪರಿಚಯವಾಗುತ್ತಿದ್ದಾರೆ. ಈ ಕೊಡಗಿನ ಕುವರಿ ‘ಒಂದು ಸನ್ನೆ ಒಂದು ಮಾತು’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಅನೇಕ ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಯಶಸ್ವಿನಿ ರಂಗಭೂಮಿ ನಂಟು ಇರುವ ಪ್ರತಿಭಾವಂತೆ. ಕಲಾವಿದರಿಗೆ ನಟನೆಯಲ್ಲಿ ತರಬೇತಿ ಮಾಡಿದ ಅನುಭವ ಸಹ ಇದೆ.

‘ಟಗರು ಪಲ್ಯ’ ಸಿನಿಮಾ ಮೂಲಕ ನಾಯಕಿಯಾದ ಅಮೃತಾ ಪ್ರೇಮ್, ‘ಪದವಿ ಪೂರ್ವ’ ಮೂಲಕ ನಾಯಕನಾದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಹಾಗೂ ಅರ್ಜುನ್ ಗೌಡ ಸೇರಿದಂತೆ ಒಂದಷ್ಟು ಯುವ ಸಿನಿಮೋತ್ಸಾಹಿಗಳಿಗೆ ನಟನೆಯ ತರಬೇತಿ ನೀಡಿದ್ದಾರೆ ಯಶಸ್ವಿನಿ. ಅಭಿನಯದೊಂದಿಗೆ ನಿರ್ದೇಶನದ ಅನುಭವ ಹೊಂದಿದ್ದಾರೆ. ಇದೀಗ ಸ್ವತಃ ಅವರೇ ನಟಿಯಾಗಿ ಪರಿಚಯವಾಗುತ್ತಿದ್ದಾರೆ. ಸಂತೋಷ್ ಬಾಗಲಕೋಟಿ ನಿರ್ದೇಶಿಸುತ್ತಿರುವ ಈ ಚಿತ್ರವು Three Monkeys Productions ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ವಿವೇಕ ಚಕ್ರವರ್ತಿ ಸಂಗೀತ ಸಂಯೋಜನೆ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

LEAVE A REPLY

Connect with

Please enter your comment!
Please enter your name here