ತಮ್ಮ ‘ಪರಮಾತ್ಮ’ ಸಿನಿಮಾದ ಹೀರೋ ಪುನೀತ್‌ಗೆ ನಿರ್ದೇಶಕ ಯೋಗರಾಜ್ ಭಟ್‌ ಗೀತನಮನ ಸಲ್ಲಿಸಿದ್ದಾರೆ. ಅವರು ‘ಪರಮಾತ್ಮ’ ಚಿತ್ರದ ಟ್ಯೂನ್‌ಗೆ ಹೊಸ ಸಾಲುಗಳನ್ನು ಬರೆದಿದ್ದು, ಅವರ ಪುತ್ರಿ ಪುನರ್ವಸು ಭಟ್ ಹಾಡಿದ್ದಾರೆ.

ಉಸಿರು ಪೂರ್ತಿ ಹೋದರೂ, ಹೆಸರು ಪೂರ್ತಿ ನೆನಪಿದೆ.. ನೀನು ಇರದೇ ಹೋದರೂ, ನಿನ್ನ ನಗೆಯ ಬೆಳಕಿದೆ… ಈ ಸಾಲುಗಳೊಂದಿಗೆ ನಿರ್ದೇಶಕ ಯೋಗರಾಜ್ ಭಟ್‌ ಅಗಲಿದ ಹೀರೋ ಪುನೀತ್‌ಗೆ ಗೀತನಮನ ಸಲ್ಲಿಸಿದ್ದಾರೆ. ಭಟ್ಟರ ನಿರ್ದೇಶನದಲ್ಲಿ ಪುನೀತ್ ನಟಿಸಿದ್ದ ಯಶಸ್ವೀ ‘ಪರಮಾತ್ಮ’ ಚಿತ್ರದ ಟ್ಯೂನ್‌ ಇದು. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಟ್ಯೂನ್‌ಗೆ ಭಟ್ಟರು ಭಾವಪೂರ್ಣ ಸಾಲುಗಳನ್ನು ಬರೆದು ಶೃದ್ಧಾಂಜಲಿ ಅರ್ಪಿಸಿದ್ದಾರೆ.  ಪುನೀತ್‌ರ ನಗೆಮೊಗದ ಭಾವಚಿತ್ರಗಳಿದ್ದು, ಹಿನ್ನೆಲೆಯಲ್ಲಿ ಗೀತೆಯಿದೆ. ಯೋಗರಾಜ್ ಭಟ್ಟರ ಪಂಚರಂಗಿ ಆಡಿಯೋದಲ್ಲಿ ಈ ಗೀತನಮನವಿದೆ.

LEAVE A REPLY

Connect with

Please enter your comment!
Please enter your name here