‘ಅನ್‌ಲಾಕ್‌ ರಾಘವ’ ಚಿತ್ರತಂಡ ‘Moods of Raghava’ ಟೀಸರ್‌ ಬಿಡುಗಡೆಗೊಳಿಸಿದೆ. ಟೀಸರ್‌ನಲ್ಲಿ ಚಿತ್ರದ ಹೀರೋ ಮಿಲಿಂದ್‌ ಅವರ ಪಾತ್ರ ಪರಿಚಯದ ಜೊತೆ ಈ ಪಾತ್ರದ ಎಮೋಷನ್ಸ್‌ ಸೆರೆಯಾಗಿವೆ. ದೀಪಕ್‌ ಮಧುವನಹಳ್ಳಿ ನಿರ್ದೇಶನದ ಚಿತ್ರದ ನಾಯಕಿಯಾಗಿ ರೇಚಲ್‌ ಡೇವಿಡ್‌ ನಟಿಸುತ್ತಿದ್ದಾರೆ.

ಡಿ ಸತ್ಯಪ್ರಕಾಶ್‌ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿರುವ ‘ಅನ್‌ಲಾಕ್‌ ರಾಘವ’ ಸುದ್ದಿಯಲ್ಲಿದೆ. ಈ ಸಿನಿಮಾದ ಹೀರೋ ಮಿಲಿಂದ್‌ ಅವರ ಪಾತ್ರವನ್ನು ಪರಿಚಯಿಸುವ ‘Moods of Raghava’ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಹೀರೋನ ಲವ್‌, ಆಕ್ಷನ್‌ ಎಮೋಷನ್ಸ್‌ ಇವೆ. ಆಕರ್ಷಕ ಹಿನ್ನೆಲೆ ಸಂಗೀತದೊಂದಿಗೆ ಮೂಡಿಬಂದಿರುವ ಟೀಸರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಅನ್‌ಲಾಕ್‌ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಡಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸುತ್ತಿದ್ದಾರೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಚಿತ್ರಕ್ಕೆ ಡಿ ಸತ್ಯಪ್ರಕಾಶ್‌ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ ಎನ್ನುವುದು ವಿಶೇಷ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ರೇಚಲ್ ಡೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here