ಸ್ಮರಣ್‌ ರೆಡ್ಡಿ ನಿರ್ದೇಶನದ ‘ಲವ್‌ ರೆಡ್ಡಿ’ ಸಿನಿಮಾದ ಫಸ್ಟ್‌ ಗ್ಲಿಂಪ್ಸಸ್‌ ಬಿಡುಗಡೆಯಾಗಿದೆ. ಶಾಸಕ ಪ್ರದೀಪ್‌ ಈಶ್ವರ್‌ ಗ್ಲಿಂಪ್ಸಸ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಂಜನ್‌ ರಾಮಚಂದ್ರ ಮತ್ತು ಶ್ರಾವಣಿ ನಟಿಸುತ್ತಿದ್ದಾರೆ.

ಅಂಜನ್‌ ರಾಮಚಂದ್ರ ಮತ್ತು ಶ್ರಾವಣಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ‘ಲವ್‌ ರೆಡ್ಡಿ’ ಸಿನಿಮಾದ ಫಸ್ಟ್‌ ಗ್ಲಿಂಪ್ಸಸ್‌ ಬಿಡುಗಡೆಯಾಗಿದೆ. ಇದೊಂದು ಎಮೋಷನಲ್‌ – ಲವ್‌ – ಡ್ರಾಮಾ ಸಿನಿಮಾ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸ್ಮರಣ್‌ ರೆಡ್ಡಿ. ತೆಲುಗಿನಲ್ಲಿ ಹಿರಿಯ ನಟ ಬಾಲಕೃಷ್ಣ ಅವರು ಗ್ಲಿಂಪ್ಸಸ್‌ ರಿಲೀಸ್‌ ಮಾಡಿದ್ದರು. ಕನ್ನಡ ಅವತರಣಿಕೆಯ ಫಸ್ಟ್‌ ಗ್ಲಿಂಪ್ಸಸ್‌, ಶಾಸಕ ಪ್ರದೀಪ್‌ ಈಶ್ವರ್‌ ಅವರಿಂದ ಬಿಡುಗಡೆಯಾಗಿದೆ. ‘ಅಂಜನ್ ರಾಮಚಂದ್ರ ನಮ್ಮ‌ ಜಿಲ್ಲೆಯ ಹುಡುಗ. ನಮ್ಮ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದಾರೆ. ಗ್ಲಿಂಪ್ಸಸ್‌ ಪ್ರಾಮಿಸಿಂಗ್‌ ಆಗಿದೆ’ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಚಿಕ್ಕಬಳ್ಳಾಪುರದ ಅಂಜನ್‌ ರಾಮಚಂದ್ರ ಈ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಅವರು, ‘ಈ ಸಿನಿಮಾ ಶುರುವಾಗುವ ಮೊದಲು ನಾನು ನಮ್ಮ ಡೈರೆಕ್ಟರ್ ಸಾಕಷ್ಟು ಸ್ಟ್ರಗಲ್ ಮಾಡಿದ್ದೇವೆ. ‌ಒಂದಷ್ಟು ಸಿ‌ನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಿಂದ ತುಂಬಾ ಜನ ಇಂಡಸ್ಟ್ರೀಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ’ ಎನ್ನುತ್ತಾರೆ. ಕಿರುಚಿತ್ರಗಳು ಮತ್ತು ವೆಬ್‌ ಸರಣಿಗಳಲ್ಲಿ ನಟಿಸಿರುವ ಅಂಜನ್‌ ಅವರಿಗೆ ಬೆಳ್ಳಿತೆರೆಯಲ್ಲಿ ಇದು ಮೊದಲ ಪ್ರಯತ್ನ. ಚಿತ್ರದ ನಿರ್ದೇಶಕ ಸ್ಮರಣ್‌ ರೆಡ್ಡಿ ಹೈದರಾಬಾದ್‌ ಮೂಲದವರು. ಕಳೆದ ಏಳೆಂಟು ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.

‘ಲವ್ ರೆಡ್ಡಿ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇಂಪ್ರೆಸೀವ್‌ ಆಗಿದ್ದು, ಗಾಢವಾದ ಪ್ರೇಮಛಾಯೆ ಕಾಣಿಸುತ್ತದೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ನಾಯಕಿಯನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ ಹೀರೋ. ಚಿಕ್ಕಬಳ್ಳಾಪುರ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ, ಎಂಜಿಆರ್ ಫಿಲಂಸ್, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುನಂದಾ ಬಿ ರೆಡ್ಡಿ, ಮದನ್ ಗೋಪಾಲ್ ರೆಡ್ಡಿ, ಪ್ರಭಂಜನ್ ರೆಡ್ಡಿ, ಹೇಮಲತಾ ರೆಡ್ಡಿ, ನಾಗರಾಜ್ ಬೀರಪ್ಪ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಾಹಣ, ಬಾಹುಬಲಿಯ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಸಿನಿಮಾಗಿದೆ.

LEAVE A REPLY

Connect with

Please enter your comment!
Please enter your name here