ಛತ್ತೀಸ್‌ಗಢ ಮೂಲದ ಖ್ಯಾತ ಯೂಟ್ಯೂಬರ್‌ ದೇವರಾಜ್‌ ಪಟೇಲ್‌ (22 ವರ್ಷ) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ‘ದಿಲ್‌ ಸೆ ಬುರಾ ಲಗ್ತಾ ಹೈ ಭಾಯ್‌’ ಖ್ಯಾತಿಯ ಹುಡುಗನ ಅಕಾಲಿಕ ನಿಧನಕ್ಕೆ ಛತ್ತೀಸ್‌ಗಢ ಮುಖ್ಯಮಂತ್ರಿ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ದಿಲ್ ಸೆ ಬುರಾ ಲಗ್ತಾ ಹೈ ಭಾಯ್’ ಯೂಟ್ಯೂಬ್‌ ಚಾನೆಲ್‌ ಖ್ಯಾತಿಯ ಯೂಟ್ಯೂಬರ್ ದೇವರಾಜ್ ಪಟೇಲ್ (22) ನಿನ್ನೆ ಸಂಜೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಯ್‌ಪುರ, ಲಾಭಂಡಿಹ್ ಬಳಿ ದೇವರಾಜ್‌ ಪಟೇಲ್‌ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿದ್ದರು. ವೇಗವಾಗಿ ಬಂದ ಟ್ರಕ್‌ ಅವರ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಹಿಂದೆ ಕುಳಿತಿದ್ದ ದೇವರಾಜ್‌ ಪಟೇಲ್‌ ತಲೆಗೆ ಪೆಟ್ಟು ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ವರದಿಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ್ದರು ದೇವರಾಜ್‌ ಪಟೇಲ್‌. ‘ಹಲೋ ದೋಸ್ತೋ’ ಎನ್ನುತ್ತಾ ರೀಲ್ಸ್‌ ಆರಂಭಿಸುತ್ತಿದ್ದ ಅವರು ಹೆಚ್ಚಾಗಿ ಕಾಮಿಡಿ ವೀಡಿಯೋಗಳನ್ನು ಮಾಡುತ್ತಿದ್ದರು. ಚಿಕ್ಕ ವಯಸ್ಸಿಗೇ ದುರ್ಘಟನೆಗೆ ಬಲಿಯಾಗಿರುವುದು ಅವರನ್ನು ಸೋಷಿಲಯ್‌ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದವರಿಗೆ ಆಘಾತ ತಂದಿದೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು, ದೇವರಾಜ್‌ ಪಟೇಲ್‌ ಜೊತೆಗಿನ ಒಂದು ವೀಡಿಯೋ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ‘ದಿಲ್ ಸೆ ಬುರಾ ಲಗ್ತಾ ಹೈ ಮೂಲಕ ಕೋಟ್ಯಂತರ ಜನರ ಮನಗೆದ್ದ ದೇವರಾಜ್ ಪಟೇಲ್ ಇಂದು ನಮ್ಮನ್ನು ಅಗಲಿದ್ದಾರೆ. ಅದ್ಭುತ ಪ್ರತಿಭೆ ಚಿಕ್ಕ ವಯಸ್ಸಿಗೇ ಅಗಲಿರುವುದು ಅಪಾರ ದುಃಖ ತಂದಿದೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ’ ಎಂದು ಬಾಘೇಲ್‌ ಟ್ವೀಟ್ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ್ದ ದೇವರಾಜ್‌, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 4 ಲಕ್ಷ ಚಂದಾದಾರರನ್ನು ಹಾಗೂ Instagramನಲ್ಲಿ 63.9K ಫಾಲೋವರ್ಸ್‌ ಹೊಂದಿದ್ದರು. ಇತ್ತೀಚಿಗೆ ದೇವರಾಜ್ ಪಟೇಲ್, ‘ದಿಂಡೋರಾ’ ವೆಬ್‌ ಸರಣಿಯಲ್ಲಿ ಮತ್ತೊಬ್ಬ ಜನಪ್ರಿಯ ಸೋಶಿಯಲ್‌ ಇನ್‌ಫ್ಲ್ಯುಯೆನ್ಸರ್‌ ಭುವನ್ ಭಾಮ್ ಅವರೊಂದಿಗೆ ಕೆಲಸ ಮಾಡಿದ್ದರು.

LEAVE A REPLY

Connect with

Please enter your comment!
Please enter your name here