ರಾಜೇಶ್‌ ಎಂ. ಸೆಲ್ವ ನಿರ್ದೇಶನದ ‘ಇನ್ವಿಸಿಬಲ್‌ ವುಮನ್‌’ ಓಟಿಟಿ ಸರಣಿ ಕಲಾವಿದರ ಬಳಗಕ್ಕೆ ಬಾಲಿವುಡ್‌ ನಟಿ ಇಶಾ ಡಿಯೋಲ್‌ ಸೇರ್ಪಡೆಗೊಂಡಿದ್ದಾರೆ. ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅವರಿಗಿದು ಚೊಚ್ಚಲ ಓಟಿಟಿ ಪ್ರಯೋಗ.

ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಇನ್ವಿಸಿಬಲ್‌ ವುಮನ್‌’ noir action thriller ಓಟಿಟಿ ಸರಣಿಯಲ್ಲಿ ನಟಿ ಇಶಾ ಡಿಯೋಲ್‌ ನಟಿಸುವುದು ಖಾತ್ರಿಯಾಗಿದೆ. ನಟಿ ಇಶಾ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ತಮ್ಮ ಫಸ್ಟ್‌ಲುಕ್‌ ಶೇರ್‌ ಮಾಡಿ, Super kicked to be working in the action packed series ‘Invisible Woman’ a very first by @YoodleeFilms with the indomitable Anna @SunielVShetty let’s smash it” ಎಂದಿದ್ದಾರೆ. Yoodlee Films ಮತ್ತು ಸರಿಗಮ ಇಂಡಿಯಾ ಜೊತೆಗೂಡಿ ಈ ಸರಣಿಯನ್ನು ನಿರ್ಮಿಸುತ್ತಿವೆ. ‘ತೂಂಗಾ ವನಂ’, ‘ಕದರಂ ಕೊಂಡನ್‌’ ಯಶಸ್ವೀ ತಮಿಳು ಸಿನಿಮಾಗಳನ್ನು ನಿರ್ದೇಶಿಸಿರುವ ರಾಜೇಶ್‌ ಎಂ. ಸೆಲ್ವ ಈ ಸರಣಿ ನಿರ್ದೇಶಿಸಲಿದ್ದಾರೆ. 40ರ ಹರೆಯದ ಇಶಾ ಡಿಯೋಲ್‌ ಈ ಹಿಂದೆ LOC: Kargil, ಒನ್‌ ಟೂ ತ್ರೀ ಸಿನಿಮಾಗಳಲ್ಲಿ ಸುನೀಲ್‌ ಶೆಟ್ಟಿ ಜೊತೆ ನಟಿಸಿದ್ದರು. ರಾಹುಲ್‌ ದೇವ್‌, ಸುಧಾ ಚಂದ್ರನ್‌, ಚಾಹತ್‌ ತೇವಾನಿ, ಕರಣ್‌ವೀರ್‌ ಶರ್ಮಾ, ಮಿಹಿರ್‌ ಅಹುಜಾ, ಮಿರ್‌ ಸರ್ವರ್‌, ಟೀನಾ ಸಿಂಗ್‌, ಸಿದ್ದಾರ್ಥ್‌ ಖೇರ್‌, ಏಣಾಕ್ಷಿ ಗಂಗೂಲಿ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ಧಾರೆ.

LEAVE A REPLY

Connect with

Please enter your comment!
Please enter your name here