ನಿಶ್ಚಿತ್‌ ಕೊರೋಡಿ ಮತ್ತು ದೀಪಿಕಾ ಆಚಾರ್ಯ ನಟನೆಯ ‘Supplier ಶಂಕರ’ ಸಿನಿಮಾಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಬಾರ್‌ ಸಪ್ಲೈಯರ್‌ ಸುತ್ತ ಕತೆ ಹೆಣೆದು ಸಿನಿಮಾ ನಿರ್ದೇಶಿಸಿದ್ದಾರೆ ರಂಜಿತ್‌ ಸಿಗಮ್‌ ರಜಪೂತ್‌. ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕ ಯೋಜನೆ.

ರಂಜಿತ್‌ ಸಿಂಗ್‌ ರಜಪೂತ್‌ ಚೊಚ್ಚಲ ನಿರ್ದೇಶನದ ‘Supplier ಶಂಕರ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ. ‘ಗಂಟುಮೂಟೆ’, ‘ಟಾಮ್ ಅಂಡ್ ಜೆರ್ರಿ’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಿಶ್ಚಿತ್‌ ಕೊರೋಡಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ‘ಲಗೋರಿ’ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ಚಿತ್ರದ ನಾಯಕಿ. ಶೀರ್ಷಿಕೆಯೇ ಹೇಳುವಂತೆ ಇದು ಬಾರ್‌ ಸಪ್ಲೈಯರ್‌ ಸುತ್ತಾ ಹೆಣೆದಿರುವ ಕತೆ. ‘ಕಂಟೆಂಟ್‌ ಪ್ರಧಾನ ಸಿನಿಮಾ. ಈಗಾಗಲೇ ತಮ್ಮ ನಟನೆಯ ಮೂಲಕ ಭರವಸೆ ಮೂಡಿಸಿರುವ ನಿಶ್ಚಿತ್‌ ಮತ್ತು ದೀಪಿಕಾರಿಗೆ ಆಪ್ತ ಪಾತ್ರಗಳಿವೆ’ ಎನ್ನುತ್ತಾರೆ ನಿರ್ದೇಶಕ ರಂಜಿತ್‌ ಸಿಂಗ್‌.

ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡಿಲ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾಗೆ ರಂಜಿತ್, ಕತೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿಯನ್ನೂ ನಿರ್ದೇಶಕ ರಂಜನ್‌ ನಿಭಾಯಿಸಿದ್ದಾರೆ. ಆರ್ ಬಿ ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರವು ಯೋಜನೆ ‘ ಹಾಕಿಕೊಂಡಿದೆ.

Previous articleಇಂದಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಜೀವನ – ‘ಗ್ರಾಮಾಯಣ’
Next article‘Supplier ಶಂಕರ’ ಶೂಟಿಂಗ್‌ ಕಂಪ್ಲೀಟ್‌ | ನಿಶ್ಚಿತ್‌ – ದೀಪಿಕಾ ಜೋಡಿ ಸಿನಿಮಾ

LEAVE A REPLY

Connect with

Please enter your comment!
Please enter your name here