ನಿಶ್ಚಿತ್‌ – ದೀಪಿಕಾ ಜೋಡಿಯ ‘Supplier ಶಂಕರ’ ಸಿನಿಮಾಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ರಂಜಿತ್‌ ಸಿಂಗ್‌ ರಜಪೂತ್‌ ನಿರ್ದೇಶನದ ಸಿನಿಮಾ ಬಾರ್‌ ಸಪೈಯರ್‌ ಕುರಿತ ಕತೆ ಹೇಳಲಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ರಂಜಿತ್‌ ಸಿಂಗ್‌ ರಜಪೂತ್‌ ಚೊಚ್ಚಲ ನಿರ್ದೇಶನದ ‘Supplier ಶಂಕರ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಶೀಷಿಕೆ ಹೇಳುವಂತೆ ಇದು ಬಾರ್‌ ಸಪ್ಲೈಯರ್‌ ಸುತ್ತ ಹೆಣೆದಿರುವ ಕತೆ. ‘ಗಂಟುಮೂಟೆ’, ‘ಟಾಮ್ ಅಂಡ್ ಜೆರ್ರಿ’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಿಶ್ಚಿತ್‌ ಕೊರೋಡಿ ಮತ್ತು ‘ಲಗೋರಿ’ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ನಮ್ಮ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕಲಾವಿದರು ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದು ಕಂಟೆಂಟ್‌ ಪ್ರಧಾನ ಸಿನಿಮಾ ಆಗಿದ್ದು, ಇಬ್ಬರ ವೃತ್ತಿಬದುಕಿಗೂ ತಿರುವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ರಂಜಿತ್‌ ಸಿಂಗ್‌.

ತ್ರಿನೇತ್ರ ಫಿಲಂಸ್‌ ಅಡಿ ತಯಾರಾಗುತ್ತಿರುವ ಚಿತ್ರಕ್ಕೆ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡಿಲ್ ಚಿತ್ರದ ಇತರೆ ಪ್ರಮುಖ ಫಾತ್ರಧಾರಿಗಳು. ನಿರ್ದೇಶಕ ರಂಜಿತ್‌ ಅವರೇ ಕತೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ರಚಿಸಿದ್ದಾರೆ. ‘ಅಮ್ಮ ನನ್ನೀ ಈ ಜನುಮ’ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯಂಕರ್‌, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ದನಿಯಾಗಿದ್ದಾರೆ. ಆರ್ ಬಿ ಭರತ್ ಸಂಗೀತ, ಸತೀಶ್ ಕುಮಾರ್ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ ಚಿತ್ರಕ್ಕಿದೆ. ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವುದು ಚಿತ್ರತಂಡದ ಯೋಜನೆ.

Previous articleಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘Supplier ಶಂಕರ’ | ನಿಶ್ಚಿತ್‌ – ದೀಪಿಕಾ ಜೋಡಿ ಸಿನಿಮಾ
Next article‘ಅನಿಮಲ್‌’ ಟೀಸರ್‌ | ರಣಬೀರ್‌ ಕಪೂರ್‌ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here