ಕೆ.ಕೆ.ಮೆನನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಸ್ಪೆಷಲ್ ಆಪ್ಸ್‌ 1.5’ ಸರಣಿಯ ಮೊದಲ ಟೀಸರ್ ಬಿಡುಗಡೆಯಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿರುವ RAW ಏಜೆಂಟ್‌ ಆಕ್ಷನ್ – ಥ್ರಿಲ್ಲರ್ ಇದು.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ‘ಸ್ಪೆಷಲ್‌ ಆಪ್ಸ್‌ 1.5’ ಸಿರೀಸ್‌ನ ಮೊದಲ ಟೀಸರ್ ಬಿಡುಗಡೆಯಾಗಿದೆ. ‘ಸ್ಪೆಷಲ್ ಆಪ್ಸ್‌’ ಯಶಸ್ಸಿನ ಹಿನ್ನೆಲೆಯಲ್ಲಿ ನೀರಜ್ ಪಾಂಡೆ ನಿರ್ದೇಶನದಲ್ಲಿ ಸ್ಟ್ರೀಮ್ ಆಗಲಿರುವ ಸೀಕ್ವೆಲ್ ಇದು. RAW ಏಜೆಂಟ್ ‘ಹಿಮ್ಮತ್ ಸಿಂಗ್‌’ ಪಾತ್ರದಲ್ಲಿ ಕೆ.ಕೆ.ಮೆನನ್‌ ಸಾಹಸಗಳು ಇಲ್ಲಿರಲಿವೆ. ಎರಡು ದಶಕಗಳ ಹಿಂದಿನ ಫ್ಲಾಶ್‌ಬ್ಯಾಕ್‌ಗೆ ಪ್ರಸ್ತುತ ಸನ್ನಿವೇಶಗಳನ್ನು ಪೋಣಿಸಿ ಕತೆ ಹೇಳುತ್ತಿದ್ದಾರೆ ನಿರ್ದೇಶಕ ಪಾಂಡೆ.

ಕೆ.ಕೆ.ಮೆನನ್ ಜೊತೆ ಅಫ್ತಬ್ ಶಿವದಾಸಾನಿ, ಆದಿಲ್ ಖಾನ್‌, ಗೌತಮ್ ಕಪೂರ್, ವಿನಯ್ ಪಾಠಕ್‌, ಪರ್ಮೀತ್ ಸೇಥಿ, ಕೆ.ಪಿ.ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. “ಇದೊಂದು ಎಕ್ಸೈಟಿಂಗ್‌ ಸರಣಿ. ಮೊದಲ ಸೀರೀಸ್‌ ಸ್ಟ್ರೀಮ್ ಆಗುತ್ತಿದ್ದಾಗಲೇ ಸೀಕ್ವೆಲ್ ಕುರಿತು ಆಲೋಚಿಸಿದ್ದೆವು. ಇಲ್ಲಿನ ಆಕ್ಷನ್ – ಥ್ರಿಲ್ಲರ್‌ಗಳು ವೀಕ್ಷಕರನ್ನು ಹಿಡಿದಿಡಲಿವೆ. ಈ ಸರಣಿ ಹೀಗೇ ಮುಂದುವರೆಯುತ್ತದೆ” ಎಂದಿದ್ದಾರೆ ನಿರ್ದೇಶಕ ನೀರಜ್ ಪಾಂಡೆ. ನಿರ್ಮಾಪಕರಾದ ಶೀತಲ್ ಭಾಟಿಯಾ, “ದುಬಾರಿ ಬಜೆಟ್‌ನಲ್ಲಿ ಅದ್ಧೂರಿಯಾಗಿಯೇ ಸೀರೀಸ್‌ ಚಿತ್ರಿಸಿದ್ದೇವೆ. ಇದು ಲಾಕ್‌ಡೌನ್ ಅವಧಿಯಲ್ಲಿ ಶೂಟ್ ಮಾಡಿದ ಸರಣಿ. ವೀಕ್ಷಕರಿಗೆ ಖಂಡಿತವಾಗಿಯೂ ಸರಣಿ ಮೆಚ್ಚುಗೆಯಾಗಲಿದೆ ಎನ್ನುವ ವಿಶ್ವಾಸ ನಮ್ಮದು” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here