ಬಾಲಿವುಡ್ನ ಖ್ಯಾತ ನೃತ್ಯನಿರ್ದೇಶಕಿ ಸರೋಜ್ ಖಾನ್ ಅವರ ಜನ್ಮದಿನವಿಂದು. ನಟಿ ಮಾಧುರಿ ದೀಕ್ಷಿತ್ ತಮ್ಮ ನೆಚ್ಚಿನ ಸರೋಜ್ ಖಾನ್ರನ್ನು ನೆನಪು ಮಾಡಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಅವರ ಜೊತೆಗಿನ ಫೋಟೊ ಶೇರ್ ಮಾಡಿ, ‘Major Missingʼ ಎಂದು ಬರೆದುಕೊಂಡಿದ್ದಾರೆ.
ಸರೋಜ್ ಖಾನ್ ಕಳೆದ ವರ್ಷ ಜುಲೈ 3 ರಂದು ತೀರಿಕೊಂಡರು. 71ರ ವಯಸ್ಸಿನಲ್ಲಿ ಕಾರ್ಡಿಯಾಕ್ ಅರೆಸ್ಟ್ನಿಂದಾಗಿ ಸರೋಜ್ ಖಾನ್ ಇನ್ನಿಲ್ಲವಾದರು. ಬಾಲಿವುಡ್ನ ಅನೇಕ ಸ್ಟಾರ್ ನಟ – ನಟಿಯರಿಗೆ ನೃತ್ಯಸಂಯೋಜನೆ ಮಾಡಿದ ಹೆಗ್ಗಳಿಕೆ ಅವರದು. ‘Masterjiʼ ಎಂದೇ ಫೇಮಸ್ ಆಗಿದ್ದ ಸರೋಜ್ ಖಾನ್ ನಟಿ ಮಾಧುರಿ ದೀಕ್ಷಿತ್ ಅವರ ಅಚ್ಚುಮೆಚ್ಚಿನ ಕೊರಿಯೋಗ್ರಾಫರ್. ಸರೋಜ್ಜೀ ಅವರು ತಮ್ಮ ವೃತ್ತಿಬದುಕಿನಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದರು ಎಂದು ಮಾಧುರಿ ನೆನಪಿಸಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ “ಮಾಧುರಿ ಕೂಡ ತಮ್ಮ ನೆಚ್ಚಿನ ವಿಧ್ಯಾರ್ಥಿನಿ” ಎಂದು ಸಂದರ್ಶನವೊಂದರಲ್ಲಿ ಸರೋಜ್ ಖಾನ್ ಹೇಳಿಕೊಂಡಿದ್ದರು.
ಸಿನಿಮಾಗಳಲ್ಲಿ ಮಾಧುರಿ ನಟನೆ ಜೊತೆಗೆ ಅವರ ನೃತ್ಯವನ್ನೂ ಜನ ಇಷ್ಟಪಡುತ್ತಾರೆ. ಪ್ರತಿ ಸಿನಿಮಾದಲ್ಲೂ ಇವರ ಸೊಲೋ ಡ್ಯಾನ್ಸ್ ನೋಡಬೇಕೆಂಬ ಬಯಕೆ ಪ್ರೇಕ್ಷಕರದ್ದು. ಮಾಧುರಿ ನೃತ್ಯಕಲೆಯನ್ನು ಸರೋಜ್ ಖಾನ್ರಿಂದ ಕಲಿತದ್ದು. ಡ್ಯಾನ್ಸ್ ಸ್ಕಿಲ್ ಜೊತೆಗೆ ಹಾವ ಭಾವ, ನೃತ್ಯಭಂಗಿ ಹೀಗೆ ಅನೇಕ ವಿದ್ಯೆಗಳನ್ನು ಇವರಿಂದಲೇ ಕಲೆತುಕೊಂಡೆ ಎಂದು ಮಾಧುರಿ ಹೇಳಿಕೊಂಡಿದ್ದಾರೆ. ಟ್ವೀಟರ್ನಲ್ಲಿ ಸರೋಜ್ ಖಾನ್ ಜೊತೆಗಿನ ಫೋಟೋ ಶೇರ್ ಮಾಡಿರುವ ಮಾಧುರಿ, “Major Missing’ ಎಂದು ಬರೆದುಕೊಂಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ತಕ್ಕ ಉದಾಹರಣೆ ಸರೋಜ್ ಖಾನ್. ಒಂದು ಕಾಲದ ಬಾಲಿವುಡ್ನಲ್ಲಿ ಪುರುಷರದ್ದೇ ಮೇಲುಗೈ ಇತ್ತು. ಸರೋಜ್ ಖಾನ್ ಆಗ ತಮ್ಮ ಕೆರಿಯರ್ ಶುರು ಮಾಡಿ ಮುಂದೆ ಬಾಲಿವುಡ್ನಲ್ಲಿ ‘Masterjiʼ ಎಂದೇ ಖ್ಯಾತಿ ಪಡೆದರು. ಈಗ ಅದು ಇತಿಹಾಸವಾಗಿದೆ” ಎಂದು ಮಾಧುರಿ ತಮ್ಮ ನೆಚ್ಚಿನ ನೃತ್ಯ ಸಂಯೋಜಕಿಯನ್ನು ನೆನಪಿಸಿಕೊಂಡಿದ್ದಾರೆ.










