Durban International Film Festivalನಲ್ಲಿ ‘ಜೋರಮ್‌’ ಹಿಂದಿ ಸಿನಿಮಾ ಎರಡು ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ನಟನಾಗಿ ಮನೋಜ್‌ ಭಾಜಪೈ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಪಿಯೂಷ್‌ ಪುಟಿ ಫಿಲ್ಮ್‌ ಫೆಸ್ಟಿವಲ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ದೇವಶೀಶ್‌ ಮಖಿಜಾ ನಿರ್ದೇಶನದ ಸೈಕಲಾಜಿಕಲ್‌ ಥ್ರಿಲ್ಲರ್‌ ‘ಜೋರಮ್‌’ ಹಿಂದಿ ಸಿನಿಮಾಗೆ Durban International Film Festivalನಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ನಟ ಮನೋಜ್‌ ಭಾಜಪೈ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರೆ ಅತ್ಯುತ್ತಮ ಛಾಯಾಗ್ರಹಣಕ್ಕೆ ಪಿಯೂಷ್‌ ಪುಟಿ ಅವರಿಗೆ ಪುರಸ್ಕಾರ ಸಂದಿದೆ. ಮಾನಸಿಕ ರೋಗಿಯೊಬ್ಬ ತನ್ನ ಮಗುವನ್ನು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುವ ವಿಶಿಷ್ಟ ಕಥಾಹಂದರ ಚಿತ್ರದ್ದು. ಜಾರ್ಖಂಡ್‌ ರಾಜ್ಯದಲ್ಲಿ ನಡೆಯುವ ಈ ಕತೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಅಸಮಾನತೆಗಳು, ಬುಡಕಟ್ಟು ಸಮುದಾಯಗಳಿಗಾಗಿರುವ ಅನ್ಯಾಯ ಮತ್ತು ಅರಣ್ಯನಾಶದಂತಹ ಸಮಸ್ಯೆಗಳು ಪ್ರಸ್ತಾಪವಾಗಿವೆ.

Zee Studios ಮತ್ತು ನಟ ಮನೋಜ್‌ ಬಾಜಪೇಯಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೊಹಮ್ಮದ್ ಜೀಶನ್, ಅಯ್ಯೂಬ್ ಸ್ಮಿತಾ ತಾಂಬೆ, ಮೇಘಾ ಮಾಥುರ್, ತನಿಷ್ಟಾ ಚಟರ್ಜಿ, ರಾಜಶ್ರೀ ದೇಶಪಾಂಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಖಿಜಾ ಫಿಲ್ಮ್ ಸಹಯೋಗದೊಂದಿಗೆ ಆಸಿಮಾ ಆವಸ್ತಿ, ದೇವಶಿಶ್ ಮಖಿಜ ಮತ್ತು ಅನುಪಮಾ ಬೋಸ್ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾ 2023ರ ಫೆಬ್ರವರಿಯಲ್ಲಿ ಥಿಯೇಟರ್‌ಗೆ ಬಂದಿತ್ತು. ಚಿತ್ರದ ಬಗ್ಗೆ ಮಾತನಾಡುವ ಮನೋಜ್‌ ಭಾಜಪೈ, ‘ಈ ಚಿತ್ರವು ಭೂತಕಾಲ ಮತ್ತು ವರ್ತಮಾನದ ನಡುವೆ ಹಂಚಿಹೋದ ವ್ಯಕ್ತಿಯ ಕತೆಯಿದು. ಜಟಿಲವಾದ ಈ ಪಾತ್ರವನ್ನು ನಾನು ತುಂಬ ಇಷ್ಟಪಟ್ಟೆ’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here