ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ರಿಕ್ಕಿ ಕೇಜ್ ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಹಾಕಿದ್ದಾರೆ. ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ಆಗಸ್ಟ್ 14ರಂದು ಸಂಜೆ 5ಕ್ಕೆ ಸಾಂಗ್ ಬಿಡುಗಡೆಯಾಗಲಿದೆ.
ಖ್ಯಾತ ಸಂಗೀತಗಾರ, ಸಿನಿಮಾ ಸಂಗೀತ ನಿರ್ದೇಶಕ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್ ರಾಷ್ಟ್ರಗೀತೆಗೆ ಹೊಸ ಟ್ಯೂನ್‌ನ ಮೆರುಗು ಕೊಟ್ಟಿದ್ದಾರೆ. ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ಈ ಸ್ಪೆಷಲ್ ಟ್ಯೂನ್ ರೆಕಾರ್ಡ್ ಮಾಡಲಾಗಿದೆ. 3 ಗಂಟೆ ಅವಧಿಯಲ್ಲಿ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ. ಸ್ವಾತಂತ್ರ್ಯ ದಿನಕ್ಕೂ ಮುನ್ನಾ ದಿನ ಆಗಸ್ಟ್ 14ರಂದು 5 ಗಂಟೆ ರಿಕ್ಕಿ ಕೇಜ್ ಸಾರಥ್ಯದ ಈ ವಿನೂತನ ಟ್ಯೂನ್‌ನ ರಾಷ್ಟ್ರಗೀತೆ ಬಿಡುಗಡೆಯಾಗಲಿದೆ. ಈ ಬಗ್ಗೆ ಮಾತನಾಡಿದ ರಿಕ್ಕಿ ಕೇಜ್, ‘ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಈ ರಾಷ್ಟ್ರಗೀತೆ ಪ್ರೆಸೆಂಟ್ ಮಾಡಲು ನಾನು ಕಾತುರನಾಗಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ’ ಎಂದಿದ್ದಾರೆ. ರಿಕ್ಕಿ ಕೇಜ್ ಕಳೆದ ವಾರ ಆಗಸ್ಟ್ 5ರಂದು ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರದ ತಮ್ಮ ಆತ್ಮೀಯ ಗೆಳೆಯ Stewart Copeland ಜೊತೆಗೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
Happy Birthday to me!.. hahah.. My friend, brother, mentor – Stewart Copeland and I, celebrating my 42nd year 🙂 Concert tonight, and new album release on the 18th! #PoliceBeyondBorders @copelandmusic pic.twitter.com/6NJl1P3caG
— Ricky Kej (@rickykej) August 5, 2023