ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ2’ ತೆಲುಗು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸುಕುಮಾರ್‌ ನಿರ್ದೇಶನದ ‘ಪುಷ್ಟ’ ಸೀಕ್ವೆಲ್‌ 2024ರ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.

‘ಪುಷ್ಪ’ ತೆಲುಗು ಸಿನಿಮಾ ಭಾರತಾದ್ಯಂತ ಸದ್ದು ಮಾಡಿತ್ತು. ಈ ಚಿತ್ರದ ಉತ್ತಮ ನಟನೆಗೆ ಹೀರೋ ಅಲ್ಲು ಅರ್ಜುನ್‌ ಅತ್ಯುತ್ತಮ ನಾಯಕನಟ ರಾಷ್ಟ್ರಪ್ರಶಸ್ತಿ ಪಡೆದರು. ಸಹಜವಾಗಿಯೇ ಚಿತ್ರದ ಸೀಕ್ವೆಲ್‌ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲವಿತ್ತು. ಚಿತ್ರತಂಡವೂ ಸೀಕ್ವೆಲ್‌ ಕುರಿತಂತೆ ವೀಡಿಯೋ, ಪೋಸ್ಟರ್‌ಗಳ ಮೂಲಕ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡುತ್ತಿರುವುದು ಹೌದು. ಇದೀಗ ಸರಣಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮುಂದಿನ ವರ್ಷ 2024ರ ಆಗಸ್ಟ್‌ 15ಕ್ಕೆ ಸಿನಿಮಾ ತೆರೆಕಾಣಲಿದೆ. ನಿರ್ದೇಶಕ ಸುಕುಮಾರ್ ಮತ್ತು ಹೀರೋ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

‘ಪುಷ್ಪ 2’ ಟೀಸರ್‌ನಲ್ಲಿ ‘ಪುಷ್ಪ’ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈಗ ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ‘ಪುಷ್ಪ2’ ಟೀಸರ್ ಝಲಕ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಫೋಟೋವಂತೂ ಟಾಲಿವುಡ್‌ಗೆ ಅಚ್ಚರಿ ತಂದಿತ್ತು. ಸೀರೆಯುಟ್ಟು, ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದಿದ್ದ ಅಲ್ಲು ಅರ್ಜುನ್‌ ಲುಕ್‌ ವಿಶಿಷ್ಟವಾಗಿತ್ತು. ಈ ಮಧ್ಯೆ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಸುದ್ದಿಯೂ ಹೊರಬಿದ್ದಿದೆ. 200 ಕೋಟಿ ರೂ. ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ‘ಪುಷ್ಪ2’ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತವಿದೆ.

Previous articleರಮೇಶ್‌ ಅರವಿಂದ್‌ – ಗಣೇಶ್‌ ಕಾಂಬಿನೇಷನ್‌ ಸಿನಿಮಾ | ಪೋಸ್ಟರ್‌ ಬಿಡುಗಡೆ
Next article‘ಸ್ಕಂದ’ 28ರಂದು ತೆರೆಗೆ | ರಾಮ್‌ ಪೋತಿನೇನಿ – ಶ್ರೀಲೀಲಾ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here