ವೆಂಕಟೇಶ್‌ ಅಭಿನಯದ ‘ಸೈಂಧವ’ ತೆಲುಗು ಸಿನಿಮಾತಂಡಕ್ಕೆ ತಮಿಳು ನಟ ಆರ್ಯ ಸೇರ್ಪಡೆಗೊಂಡಿದ್ದಾರೆ. ಶೈಲೇಶ್‌ ಕೋಲನು ನಿರ್ದೇಶನದ ಇದು ವೆಂಕಟೇಶ್‌ ಅವರ 75ನೇ ಸಿನಿಮಾ. ಇದೇ ವರ್ಷ ಡಿಸೆಂಬರ್‌ 22ರಂದು ಸಿನಿಮಾ ತೆರೆಕಾಣಲಿದೆ.

ಶೈಲೇಶ್‌ ಕೋಲನು ನಿರ್ದೇಶನದಲ್ಲಿ ವೆಂಕಟೇಶ್‌ ಅಭಿನಯಿಸುತ್ತಿರುವ ‘ಸೈಂಧವ’ ತೆಲುಗು ಸಿನಿಮಾ ತಂಡಕ್ಕೆ ಖ್ಯಾತ ತಮಿಳು ನಟ ಆರ್ಯ ಸೇರ್ಪಡೆಗೊಂಡಿದ್ದಾರೆ. ವೆಂಕಟೇಶ್‌ ನಟನೆಯ 75ನೇ ಚಿತ್ರವಿದು. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಎಂಟು ಪ್ರಮುಖ ನಾಯಕನಟರು ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸಾಹಸ ಸಂಯೋಜಕರಾದ ರಾಮ್‌ – ಲಕ್ಷ್ಮಣ ಸಾಹಸ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿನ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಸಣ್ಣ ವೀಡಿಯೋವನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆಗೊಳಿಸಿತ್ತು. ಇದೀಗ ತಮಿಳುನಟ ಆರ್ಯ ‘ಸೈಂಧವ’ ಭಾಗವಾಗಿದ್ದಾರೆ. ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ. ಉದ್ದ ಕೂದಲು ಬಿಟ್ಟು ಸ್ಟೈಲೀಶ್ ಲುಕ್‌ನಲ್ಲಿ ಮಿಂಚಿರುವ ಆರ್ಯ, ಕೈಯಲ್ಲಿ ಗನ್ ಹಿಡಿದು ಹೆಜ್ಜೆ ಹಾಕುತ್ತಿರುವ ಪೋಸ್ಟರ್ ಗಮನ ಸೆಳೆಯುತ್ತದೆ.

ನಿಹಾರಿಕಾ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ನಟಿ ಶ್ರದ್ಧಾ ಅವರು ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗ ಪ್ರವೇಶಿಸಿದ್ದಾರೆ. ವೆಂಕಟೇಶ್‌ ಲ್ಯಾಂಡ್‌ಮಾರ್ಕ್‌ ಸಿನಿಮಾ ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಸಂತೋಷ್‌ ನಾರಾಯಣ್‌ ಸಂಗೀತ, ಮಣಿಕಂಠನ್‌ ಛಾಯಾಗ್ರಹಣ, ಗ್ಯಾರಿ ಬಿ ಎಚ್‌ ಸಂಕಲನವಿದೆ. ಅವಿನಾಶ್‌ ಕೊಲ್ಲ, ಕಿಶೋರ್ ತಲ್ಲೂರ್ ನಿರ್ಮಿಸುತ್ತಿರುವ ಸಿನಿಮಾ ಡಿಸೆಂಬರ್ 22ರಂದು ಕ್ರಿಸ್ಮಸ್‌ಗೆ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here