‘ಬಾಹುಬಲಿ’ ಸಿನಿಮಾ ಖ್ಯಾತಿಯ ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮ ನಟನೆ, ನಿರ್ಮಾಣದ ‘ಹಿರಣ್ಯಕಶ್ಯಪ’ ಕಾನ್ಸೆಪ್ಟ್‌ ಟೀಸರ್‌ ರಿವೀಲ್‌ ಮಾಡಿದ್ದಾರೆ. ಕಾನ್ಸೆಪ್ಟ್‌ ಟೀಸರ್‌ನಲ್ಲಿ ಪೌರಾಣಿಕ ಪಾತ್ರಗಳ ಸ್ಕೆಚ್‌ಗಳಿವೆ. ಟಾಲಿವುಡ್‌ನ ಖ್ಯಾತ ತೆಲುಗು ಚಿತ್ರನಿರ್ದೇಶಕ ತ್ರಿವಿಕ್ರಮ್‌ ಈ ಸಿನಿಮಾಗೆ ಚಿತ್ರಕಥೆ ರಚಿಸುತ್ತಿದ್ದಾರೆ.

ಬ್ಲಾಕ್‌ಬಸ್ಟರ್‌ ‘ಬಾಹುಬಲಿ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡ ರಾಣಾ ದಗ್ಗುಬಾಟಿ ಇದೀಗ ಮತ್ತೊಂದು ಅಂಥದ್ದೇ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅಮರ ಚಿತ್ರಕಥಾ ಕಾಮಿಸ್‌ನಿಂದ ಸ್ಫೂರ್ತಿ ಪಡೆದ ಅವರು ‘ಹಿರಣ್ಯಕಶ್ಯಪ’ ಪೌರಾಣಿಕ ಸಿನಿಮಾ ನಿರ್ಮಿಸುತ್ತಿದ್ದಾರೆ. ಶೀರ್ಷಿಕೆ ಪಾತ್ರದಲ್ಲಿ ಅವರೇ ನಟಿಸಲಿದ್ದಾರೆ. ಇಂದು ಅವರ ಮಹತ್ವಾಕಾಂಕ್ಷೆಯ ಸಿನಿಮಾ, ಪಾತ್ರದ ಕಾನ್ಸೆಪ್ಟ್‌ ಟೀಸರ್‌ ಬಿಡಗಡೆಯಾಗಿದೆ. ಆಕರ್ಷಕ ಹಿನ್ನೆಲೆ ಸಂಗೀತದ ಟೀಸರ್‌ನಲ್ಲಿ ಸಿನಿಮಾದಲ್ಲಿ ಬರಬಹುದಾದ ಪೌರಾಣಿಕ ಪಾತ್ರಗಳ ಸ್ಕೆಚ್‌ಗಳಿವೆ. ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ನಟ ರಾಣಾ, ‘The demon king has arrived. Watch him come to life in our next project’ ಎನ್ನುವ ಒಕ್ಕಣಿಯೊಂದಿಗೆ ಕಾನ್ಸೆಪ್ಟ್‌ ಟೀಸರ್‌ ಹಂಚಿಕೊಂಡಿದ್ದಾರೆ. ಸಿನಿಮಾ ಕುರಿತ ಇನ್ನಿತರೆ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

https://www.instagram.com/reel/CvISIkIAovr/?utm_source=ig_web_copy_link

ಮೊನ್ನೆ San Diego Comic Conನಲ್ಲಿ ‘Kalki 2898 AD’ ಸಿನಿಮಾ ಘೋಷಣೆ ಸಂದರ್ಭದಲ್ಲಿ ರಾಣಾ ತಮ್ಮ ಮಹತ್ವಾಕಾಂಕ್ಷೆಯ ಚಿತ್ರದ ಬಗ್ಗೆ ಹೇಳಿಕೊಂಡಿದ್ದರು. ರಾಣಾ ಅವರ Spirit Media ಮತ್ತು ‘ಮಿನ್ನಾಲ್‌ ಮುರಳಿ’ ಮಲಯಾಳಂ ಸಿನಿಮಾ ನಿರ್ಮಿಸಿದ್ದ Weekend Blockbusters ಜೊತೆಗೂಡಿ ‘ಹಿರಣ್ಯಕಶ್ಯಪ’ ನಿರ್ಮಿಸುತ್ತಿವೆ. ಖ್ಯಾತ ಟಾಲಿವುಡ್‌ ನಿರ್ದೇಶಕ ತ್ರಿವಿಕ್ರಮ್‌ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ರಾಣಾ ಅವರು ತಮ್ಮ Spirit media ಬ್ಯಾನರ್‌ನಡಿ ”Lords of the Deccan’ ಆಕ್ಷನ್‌ – ಡ್ರಾಮಾ ಸರಣಿಯನ್ನೂ ನಿರ್ಮಿಸುತ್ತಿದ್ದಾರೆ. ಅನಿರುದ್ಧ ಕನಿಸೆಟ್ಟಿ ರಚನೆಯ ‘The Deccan: Southern India from Chalukyas to Cholas’ ಕೃತಿ ಆಧರಿಸಿ ತಯಾರಾಗುತ್ತಿರುವ ಸರಣಿಯಿದು. ಈ ಸರಣಿ SonyLIVನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ ‘RRR 2’ | ಸಿದ್ಧವಾಗುತ್ತಿದೆ ವಿಜಯೇಂದ್ರ ಪ್ರಸಾದ್‌ ಚಿತ್ರಕಥೆ
Next articleಬೊಂಬಾಟ್‌ ಭೋಜನ – 850 | ಮೂರನೇ ಸೀಸನ್‌ ಸಂಭ್ರಮದಲ್ಲಿ ಸಿಹಿಕಹಿ ಚಂದ್ರು

LEAVE A REPLY

Connect with

Please enter your comment!
Please enter your name here