ಮರಳು ಶಿಲ್ಪಿ ಮಾನಸ್‌ ಕುಮಾರ್‌ ಒರಿಸ್ಸಾದ ಸಮುದ್ರ ತೀರದಲ್ಲಿ ನಟ ಸುದೀಪ್‌ ಅವರ ಮರಳು ಶಿಲ್ಪ ರಚಿಸುವ ಮೂಲಕ ನಟನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ದಕ್ಷಿಣ ಭಾರತದ ಸಿನಿಮಾ ನಟರ ಪೈಕಿ ಹಿಂದೆ ವಿಷ್ಣುವರ್ಧನ್‌ ಅವರಿಗೆ ಈ ಗೌರವ ಲಭಿಸಿತ್ತು.

ನಟ ಸುದೀಪ್‌ ಪ್ಯಾನ್‌ ಇಂಡಿಯಾ ನಟ. ದಕ್ಷಿಣದ ಪ್ರಾದೇಶಿಕ ಭಾಷೆಗಳಲ್ಲದೆ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿರುವ ಅವರಿಗೆ ದೇಶದ ಹಲವೆಡೆ ಅಭಿಮಾನಿಗಳಿದ್ದಾರೆ. ಸೆಪ್ಟೆಂಬರ್ 2 ಸುದೀಪ್ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮರಳು ಶಿಲ್ಪಿ ಮಾನಸ್ ಕುಮಾರ್ ಒರಿಸ್ಸಾದ ಸಮುದ್ರ ತೀರದಲ್ಲಿ ಸುದೀಪ್ ಅವರ ಮರಳು ಶಿಲ್ಪ ನಿರ್ಮಿಸುವ ಮೂಲಕ ಶುಭಾಶಯ ಕೋರಿದ್ದಾರೆ. ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿಗೆ ಹೇಗಿರಬೇಕು ಎನ್ನುವ ಕುರಿತು ಮಾನಸ್‌ರಿಗೆ ಅಗತ್ಯ ಮಾಹಿತಿ ನೀಡಿ ನೆರವಾಗಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದ ಸುದೀಪ್. ಈ ಹಿಂದೆ 2020ರಲ್ಲಿ ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು. ಅದರ ಹೊರತಾಗಿ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಈ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿ ತಂದಿದೆ.

LEAVE A REPLY

Connect with

Please enter your comment!
Please enter your name here