ಆರ್ಯನ್‌ ಖಾನ್ ಸಿಲುಕಿರುವ ಡ್ರಗ್ಸ್ ಪ್ರಕರಣ ಉದಯೋನ್ಮುಖ ನಟಿ ಅನನ್ಯಾ ಪಾಂಡೆಗೂ ಉರುಳಾಗುವ ಸಾಧ್ಯತೆಗಳಿವೆ. ನಟಿ ಇಂದು NCB ಕಚೇರಿಗೆ ಭೇಟಿ ನೀಡಿ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ಹಿರಿಯ ನಟ ಚಿಂಕಿ ಪಾಂಡೆ ತಾರಾಪುತ್ರಿ ಅನನ್ಯಾ ಪಾಂಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ ಆರ್ಯನ್ ಖಾನ್ ಜೊತೆಗಿನ ಮೊಬೈಲ್ ವಾಟ್ಸ್‌ಆಫ್ ಚಾಟ್‌ಗಳ ಆಧಾರದ ಮೇಲೆ NCB ಅನನ್ಯಾರ ವಿಚಾರಣೆ ನಡೆಸಿದೆ. ಇಂದು ತನ್ನ ತಂದೆ ಚಿಂಕಿ ಪಾಂಡೆಯೊಂದಿಗೆ NCB ಕಚೇರಿಗೆ ಭೇಟಿ ನೀಡಿದ ಅನನ್ಯಾ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೊತೆಗೆ ಇಂದು ಶಾರುಖ್ ನಿವಾಸ ‘ಮನ್ನತ್‌’ ಮತ್ತು ಅನನ್ಯಾ ಮನೆಗಳಿಗೆ ತೆರಳಿ NCB ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಅನನ್ಯಾ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.

ಚಿಂಕಿ ಪಾಂಡೆ ಪುತ್ರಿ ಅನನ್ಯಾ ‘ಸ್ಟೂಡೆಂಟ್ ಆಫ್‌ ದಿ ಯಿಯರ್‌ 2’ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದವರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪದಾರ್ಪಣೆ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಸಂದಿತ್ತು. ಮುಂದೆ ‘ಪತಿ ಪತ್ನಿ ಔರ್ ವೊಹ್‌’ ಕಾಮಿಡಿ ಚಿತ್ರದಲ್ಲಿ ನಟಿಸಿದ ಅನನ್ಯಾ ಸದ್ಯ ‘ಲಿಗರ್‌’ ಹಿಂದಿ ಮತ್ತು ತೆಲುಗು ದ್ವಿಭಾಷಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಸ್ಪೋರ್ಟ್ಸ್‌ ಅಕ್ಷನ್ ಡ್ರಾಮಾ ಸಿನಿಮಾ ಇದು. ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ಇದೀಗ ಅನನ್ಯಾಗೆ ಡ್ರಗ್ಸ್ ಕಂಟಕ ಎದುರಾಗಿದ್ದು, ಮುಂದಿನ ದಿನಗಳು ಅವರಿಗೆ ಯಾವ ರೀತಿಯ ಸಂಕಷ್ಟ ತಂದೊಡ್ಡಬಹುದು ಎಂದು ನೋಡಬೇಕು.

Previous articleಪುತ್ರನ ನೋಡಲು ಜೈಲಿಗೆ ಬಂದ ಶಾರುಖ್; ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ
Next articleನವೀನ ತಂತ್ರಜ್ಞಾನದೊಂದಿಗೆ ‘ಭಾಗ್ಯವಂತರು’; ನವೆಂಬರ್‌ನಲ್ಲಿ ಡಾ.ರಾಜ್ ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here