ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್ ಪ್ರಕರಣದ ನಂತರ ಮೊದಲ ಬಾರಿ ಶಾರುಖ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬಯಿಯ ಅರ್ಥೂರ್‌ ರೋಡ್‌ನಲ್ಲಿರುವ ಜೈಲಿಗೆ ಭೇಟಿ ನೀಡಿದ ನಟ ಪುತ್ರನ ಯೋಗಕ್ಷೇಮ ವಿಚಾರಿಸಿದರು.

ಆರ್ಯನ್ ಖಾನ್ ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಮೇಲೆ ನಟ ಶಾರುಖ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಯಾವುದೇ ಪೋಸ್ಟ್‌ ಹಾಕಿಲ್ಲ. ಸಿನಿಮಾ ಶೂಟಿಂಗ್‌ಗಳನ್ನೆಲ್ಲಾ ಕ್ಯಾನ್ಸಲ್ ಮಾಡಿಕೊಂಡು ಸಂಪೂರ್ಣವಾಗಿ ಪುತ್ರನಿಗೆ ಜಾಮೀನು ಕೊಡಿಸುವ ಗಡಿಬಿಡಿಯಲ್ಲಿದ್ದರು. ಮೊನ್ನೆ ವಿಚಾರಣೆಯ ನಂತರ ಅರ್ಯನ್‌ಗೆ ಜಾಮೀನು ಸಿಗುತ್ತದೆ ಎಂದೇ ಹೇಳಲಾಗಿತ್ತು. ಆದರೆ ಜೈಲು ವಾಸ ಮುಂದುವರೆಯಿತು. ಹಾಗಾಗಿ ಇಂದು ಶಾರುಖ್ ಜೈಲಿಗೆ ಭೇಟಿ ನೀಡಿ ಪುತ್ರನನ್ನು ಮಾತನಾಡಿಸಿದರು. ಮುಂದಿನ ವಾರ ಅಕ್ಟೋಬರ್ 22ರಂದು ಮತ್ತೊಂದು ವಿಚಾರಣೆ ನಡೆಯಲಿದ್ದು, ಆರ್ಯನ್‌ಗೆ ಜಾಮೀನು ಸಿಗುವುದೇ ಎಂದು ನೋಡಬೇಕು.

ಈ ಮಧ್ಯೆ ಇಂದು NCB ಅಧಿಕಾರಿಗಳು ಶಾರುಖ್ ಖಾನ್‌ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯದಾರಗಳಿಗಾಗಿ ಅವರು ಮನೆಗೆ ತೆರಳಿದ್ದರು ಎನ್ನಲಾಗಿದೆ. ಈ ಪ್ರಕರಣದ ನಂತರ ಬಾಲಿವುಡ್‌ನ ಹಲವರು ಶಾರುಖ್ ಮನೆಗೆ ಭೇಟಿ ನೀಡಿದ್ದಾರೆ. ತಾರೆಯರಾದ ಸಲ್ಮಾನ್ ಖಾನ್‌, ಪ್ರೀತಿ ಝಿಂಟಾ ಮತ್ತಿತರರು ಶಾರುಖ್ – ಗೌರಿ ದಂಪತಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಉಳಿದಂತೆ ಹನ್ಸಲ್ ಮೆಹ್ತಾ, ಟ್ವಿಂಕಲ್ ಖನ್ನಾ, ಸ್ವರ ಭಾಸ್ಕರ್‌, ಹೃತಿಕ್ ರೋಷನ್‌, ಪರ್ಹಾ ಖಾನ್‌, ಜೋಹಾ ಅಖ್ತರ್‌, ರೀಮಾ ಕಾಟ್ಗಿ ಮೊದಲಾದವರು ಶಾರುಖ್‌ ಪರ ಮಾತನಾಡಿ ವಿಶ್ವಾಸ ತುಂಬಿದ್ದಾರೆ.

LEAVE A REPLY

Connect with

Please enter your comment!
Please enter your name here