ವಿಕಾಸ್ ಬೆಹ್ಲ್ ನಿರ್ದೇಶನದ ಸೂಪರ್‌ನ್ಯಾಚುರಲ್ ಥ್ರಿಲ್ಲರ್ ಚಿತ್ರದೊಂದಿಗೆ ನಟಿ ಜ್ಯೋತಿಕಾ ಬಾಲಿವುಡ್‌ಗೆ ಹಿಂದಿರುಗುತ್ತಿದ್ದಾರೆ. ಅಜಯ್ ದೇವಗನ್ ಮತ್ತು ಆರ್ ಮಾಧವನ್ ಚಿತ್ರದ ಇಬ್ಬರು ಹೀರೋಗಳು.
ನಟಿ ಜ್ಯೋತಿಕಾ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡ ಹಿಂದಿ ಸಿನಿಮಾ ‘ಲಿಟ್ಲ್ ಜಾನ್’ (2001). ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಚಿತ್ರ ಹಿಂದಿ, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ತೆರೆಕಂಡಿತ್ತು. ಈ ಚಿತ್ರದ ನಂತರ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಎರಡು ದಶಕಗಳ ನಂತರ ಅವರು ಬಾಲಿವುಡ್‌ಗೆ ಮರಳುತ್ತಿದ್ದಾರೆ. ವಿಕಾಸ್ ಬೆಹ್ಲ್ ನಿರ್ದೇಶನದ ಸೂಪರ್‌ನ್ಯಾಚುಲರ್ ಥ್ರಿಲ್ಲರ್ ಚಿತ್ರದ ನಾಯಕಿಯಾಗಿ ಅವರು ನಟಿಸುತ್ತಿದ್ದು, ಅಜಯ್ ದೇವಗನ್ ಮತ್ತು ಆರ್ ಮಾಧವನ್ ಚಿತ್ರದ ಇಬ್ಬರು ನಾಯಕನಟರು. ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಜ್ಯೋತಿಕಾರ ಫೋಟೊದೊಂದಿಗೆ ಸಿನಿಮಾ ಮಾಹಿತಿ ಹಂಚಿಕೊಂಡಿದ್ದಾರೆ.
JYOTIKA JOINS AJAY DEVGN – R MADHAVAN FOR SUPERNATURAL THRILLER… #Jyotika returns to #Hindi films after two decades, will share screen space with #AjayDevgn and #RMadhavan in #PanoramaStudios’ supernatural thriller, directed by #VikasBahl… The film – not titled yet – will go on… pic.twitter.com/O5mjMis7ZH
— taran adarsh (@taran_adarsh) May 15, 2023
ಅಜಯ್ ದೇವಗನ್, ಕುಮಾರ್ ಮಂಗತ್ ಮತ್ತು ಅಭಿಷೇಕ್ ಪಥಕ್ ನಿರ್ಮಾಣದ ಚಿತ್ರಕ್ಕೆ ಜೂನ್‌ನಲ್ಲಿ ಚಾಲನೆ ಸಿಗಲಿದೆ. ಮುಂಬೈ, ಮಸ್ಸೂರಿ ಮತ್ತು ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ. ಇನ್ನು ಇತ್ತೀಚೆಗೆ ಅವರು ‘ಶ್ರೀ’ ಬಯೋಗ್ರಫಿಕಲ್ – ಡ್ರಾಮಾ ಹಿಂದಿ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಧ ಉದ್ಯಮಿ ಶ್ರೀಕಾಂತ್ ಬೊಲ್ಲ ಅವರ ಜೀವನ – ಸಾಧನೆ ಆಧರಿಸಿದ ಚಿತ್ರವಿದು. ಜ್ಯೋತಿಕಾ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ‘Kaathal’ ಮಲಯಾಳಂ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಹೀರೋ ಮುಮ್ಮೂಟಿ. ಮೇರುನಟನೊಂದಿಗೆ ಜ್ಯೋತಿಕಾಗೆ ಇದು ಮೊದಲ ಸಿನಿಮಾ.