ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಸುತ್ತಲಿನ ವದಂತಿಗಳನ್ನು ಅಲ್ಲಗಳೆಯಲು ಹೇಳಿಕೆಯೊಂದನ್ನು ನೀಡಿದ್ದಾರೆ. ಇಂಥ ವಿಷಯಗಳು ತಮ್ಮ ಆತ್ಮಸ್ಥೈರ್ಯ ಕುಂದಿಸುವುದಿಲ್ಲ ಎನ್ನುವ ಆತ್ಮವಿಶ್ವಾಸ ಅವರದು.

ಸಮಂತಾ ಯಾರದ್ದೋ ಜೊತೆಗೆ ಸಂಬಂಧ ಹೊಂದಿದ್ದಾರೆ, ಆಕೆಗೆ ಮಕ್ಕಳನ್ನು ಮಾಡಿಕೊಳ್ಳೋದು ಇಷ್ಟವಿರಲಿಲ್ಲ, ಗರ್ಭಪಾತ ಮಾಡಿಸಿಕೊಂಡಿದ್ದರಂತೆ… ಎನ್ನುವ ವದಂತಿಗಳನ್ನು ಹರಿಬಿಡುತ್ತಿರುವುದರ ಕುರಿತು ಸ್ವತಃ ಸಮಂತಾ ಹೇಳಿಕೆ ನೀಡಿದ್ದಾರೆ. ಕಳೆದ ವಾರ ನಾಗ ಚೈತನ್ಯ ಅವರಿಂದ ಬೇರ್ಪಡುತ್ತಿರುವುದಾಗಿ ಸಮಂತಾ ಹೇಳಿಕೊಂಡಿದ್ದರು. ಇದೆಲ್ಲವೂ ಆದ ನಂತರ ಆಗಿರುವ ಬೆಳವಣಿಗೆಗಳು, ವದಂತಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಇದು ನನ್ನ ಮೇಲಿನ ವೈಯಕ್ತಿಕ ದಾಳಿಯಾಗಿದೆ. ಆದರೆ, ಈ ವಿಷಯಗಳಿಂದ ನನ್ನ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಸಮಂತಾ. “ನನ್ನ ವೈಯಕ್ತಿಕ ಬಿಕ್ಕಟ್ಟಿಗೆ ನಿಮ್ಮೆಲ್ಲರ ಭಾವನಾತ್ಮಕ ಪ್ರತಿಕ್ರಿಯೆ ನನ್ನನ್ನು ಆವರಿಸಿದೆ. ನನ್ನ ಕಡೆ  ಸಹಾನುಭೂತಿ, ಕಾಳಜಿ ತೋರಿಸಿದ್ದಕ್ಕಾಗಿ ಮತ್ತು ಸುಳ್ಳು ವದಂತಿಗಳು ಮತ್ತು ಕೆಲವರು ಹರಡುತ್ತಿರುವ ಕಥೆಗಳಿಂದ ವಿಚಲಿತರಾಗದೆ, ನನ್ನ ಮೇಲೆ ನಂಬಿಕೆ ಇಟ್ಟವರಿಗೆ ಧನ್ಯವಾದಗಳು” ಎಂದು ಸಮಂತಾ ಹೇಳಿಕೊಂಡಿದ್ದಾರೆ. “ನನಗೆ ಬೇರೆಯವರೊಂದಿಗೆ ಸಂಬಂಧವಿದೆ, ಮಕ್ಕಳನ್ನು ಮಾಡಿಕೊಳ್ಳೋದು ಇಷ್ಟವಿರಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ” ಎಂದೆಲ್ಲಾ ಸುದ್ದಿ ಹಬ್ಬಿಸುವವರಿಂದ ತಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಸೆಟೆದು ನಿಂತಿದ್ದಾರೆ ಸಮಂತಾ. “ವಿಚ್ಛೇದನವು ಅತ್ಯಂತ ಬೇಸರದ ಪ್ರಕ್ರಿಯೆ. ನನಗೆ ಅದರಿಂದ ಹೊರಗೆ ಬರಲು ಸಮಯ ಬೇಕು. ಆದರೆ ಈ ಸಮಯದಲ್ಲಿ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಯುತ್ತಿದೆ. ಆದರೆ ನಾನು ಇದಕ್ಕೆಲ್ಲಾ ಬಗ್ಗುವುದಿಲ್ಲ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here