ನಂದಮೂರಿ ಬಾಲಕೃಷ್ಣ ಅವರ ನೂತನ ತೆಲುಗು ಸಿನಿಮಾದ ಖಳ ಪಾತ್ರದಲ್ಲಿ ದುನಿಯಾ ವಿಜಯ್‌ ನಟಿಸುವುದು ಖಾತ್ರಿಯಾಗಿದೆ. ಈ ಚಿತ್ರ ನಿರ್ದೇಶಿಸಲಿರುವ ಗೋಪಿಚಂದ್‌ ಮಲಿನೇನಿ ಟ್ವೀಟ್‌ ಮಾಡುವ ಮೂಲಕ ಸುದ್ದಿಯಲ್ಲಿ ಖಚಿತಪಡಿಸಿದ್ದಾರೆ.

“Very happy to welcome the Sandalwood Sensation #DuniyaVijay on board to #NBK107. Redefines the Villainism with #NBK107.” ಎಂದು ತಮ್ಮ ಚಿತ್ರತಂಡಕ್ಕೆ ಕನ್ನಡ ನಟ ದುನಿಯಾ ವಿಜಯ್‌ ಅವರನ್ನು ಸ್ವಾಗತಿಸಿದ್ದಾರೆ ನಿರ್ದೇಶಕ ಗೋಪಿಚಂದ್‌ ಮಲಿನೇನಿ. ‘ಅಖಂಡ’ ಸಿನಿಮಾದ ಯಶಸ್ಸಿನಲ್ಲಿರುವ ನಂದಮೂರಿ ಬಾಲಕೃಷ್ಣ ಅವರೆದುರು ಖಳನಾಗಿ ನಟಿಲಿದ್ದಾರೆ ದುನಿಯಾ ವಿಜಯ್‌. ಚಿತ್ರವನ್ನು ‘NBK107’ ಎಂದು ಕರೆದಿದ್ದು, ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಇದೊಂದು ಕಮರ್ಷಿಯಲ್‌ ಎಂಟರ್‌ಟೇನರ್‌ ಆಗಲಿದ್ದು ಮೈತ್ರಿ ಮೂವೀ ಮೇಕರ್ಸ್‌ ಬ್ಯಾನರ್‌ನಡಿ ನವೀನ್‌ ಯೆರ್ನೇನಿ, ವೈ.ರವಿಶಂಕರ್‌ ಸಿನಿಮಾ ನಿರ್ಮಿಸುತ್ತಿದ್ಧಾರೆ. ಶ್ರುತಿ ಹಾಸನ್‌ ಚಿತ್ರದ ನಾಯಕಿ. ಎಸ್‌.ತಮನ್‌ ಸಂಗೀತ ಸಂಯೋಜನೆ, ರಿಷಿ ಪಂಜಾಬಿ ಛಾಯಾಗ್ರಹಣ ಸಿನಿಮಾಗೆ ಇರಲಿದೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎನ್ನುವುದು ಚಿತ್ರತಂಡದ ಮಾಹಿತಿ. ಇನ್ನು 2021ರಲ್ಲಿ ‘ಲೆಜೆಂಡ್‌’ ಚಿತ್ರದೊಂದಿಗೆ ಬಾಲಕೃಷ್ಣ, ‘ಸಲಗ’ ಚಿತ್ರದೊಂದಿಗೆ ದುನಿಯಾ ವಿಜಯ್‌ ಗೆಲುವಿನ ಅಲೆಯಲ್ಲಿದ್ದಾರೆ.

Previous articleಸೂಜಿಗಲ್ಲಿನಂತೆ ಸೆಳೆಯುವ ‘ಕ್ರೈಂ ಸ್ಟೋರಿಸ್: ಇಂಡಿಯಾ ಡಿಟೆಕ್ಟಿವ್ಸ್’
Next articleನೂತನ ವರ್ಷಾಚರಣೆಯ ವೀಡಿಯೋ ಹಂಚಿಕೊಂಡ ಅದಿತಿ; ಭಾವಿ ಪತಿ ಜೊತೆಗೆ ಸುತ್ತಾಟ

LEAVE A REPLY

Connect with

Please enter your comment!
Please enter your name here