ಮೊನ್ನೆ OTT 2023 ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜನೆಗೊಂಡಿತ್ತು. ಆಲಿಯಾ ಭಟ್‌ ‘ಡಾರ್ಲಿಂಗ್ಸ್‌’ ವೆಬ್ ಚಿತ್ರದ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು, ರಾಜ್‌ಕುಮಾರ್ ರಾವ್ ಅವರು ‘ಮೋನಿಕಾ ಓ ಮೈ ಡಾರ್ಲಿಂಗ್‌’ Netflix ಚಲನಚಿತ್ರಕ್ಕಾಗಿ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ.

ಮೊನ್ನೆ ಫಿಲ್ಮ್‌ಫೇರ್ OTT 2023 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ OTT ಸರಣಿ, ವೆಬ್ ಸಿನಿಮಾಗಳ ನಟ – ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆಲಿಯಾ ಭಟ್‌ ‘ಡಾರ್ಲಿಂಗ್ಸ್‌’ ವೆಬ್ ಚಿತ್ರದ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು, ರಾಜ್‌ಕುಮಾರ್ ರಾವ್ ಅವರು ‘ಮೋನಿಕಾ ಓ ಮೈ ಡಾರ್ಲಿಂಗ್‌’ Netflix ಚಲನಚಿತ್ರಕ್ಕಾಗಿ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ. ಕರಿಷ್ಮಾ ತನ್ನಾಗೆ ‘ಸ್ಕೂಪ್’ ಸರಣಿಗಾಗಿ, ಸೋನಾಕ್ಷಿ ಸಿನ್ಹಾ ಅವರಿಗೆ ‘ದಹಾದ್‌’ ಸರಣಿಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ದೊರೆತಿವೆ.

‘ದಹಾದ್‌’ ಸರಣಿಗಾಗಿ ವಿಜಯ್ ವರ್ಮಾ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಸ್ಕೂಪ್‌’ ಸರಣಿಗೆ ‘ಅತ್ಯುತ್ತಮ ಸರಣಿ’ ಪ್ರಶಸ್ತಿ, ‘ಟ್ರಯಲ್ ಬೈ ಫೈರ್’ ಸರಣಿಗೆ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ಸರಣಿ’ ಪ್ರಶಸ್ತಿ ದೊರೆತಿದೆ. ಶರ್ಮಿಳಾ ಟ್ಯಾಗೋರ್ ಅವರು ‘ಗುಲ್‌ಮೊಹರ್‌’ ಸರಣಿಗಾಗಿ ಮತ್ತು ಸಾನ್ಯಾ ಮಲ್ಹೋತ್ರಾ ‘ಕಥಲ್’ ಸರಣಿಗಾಗಿ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೂಲ ವೆಬ್ ಚಿತ್ರ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರಕ್ಕಾಗಿ ಅಪೂರ್ವ್ ಸಿಂಗ್ ಕರ್ಕಿ ಅತ್ಯುತ್ತಮ ನಿರ್ದೇಶಕ ಗೌರವ ಪಡೆದಿದ್ದಾರೆ.

LEAVE A REPLY

Connect with

Please enter your comment!
Please enter your name here