ಜನಪ್ರಿಯ ನಟ ಶಾರುಖ್‌ ಖಾನ್‌ ಬೆಳ್ಳಿತೆರೆಗೆ ಪರಿಚಯವಾಗಿ ಇಂದಿಗೆ ಮೂವತ್ತು ವರ್ಷ. ಈ ಮೈಲುಗಲ್ಲು ತಲುಪಿದ ಸಂದರ್ಭದಲ್ಲಿ ಶಾರುಖ್‌ರ ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಸಿನಿಮಾ 2023ರ ಜನವರಿ 25ರಂದು ತೆರೆಕಾಣಲಿದೆ.

ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಜನಪ್ರಿಯ ತಾರೆ ಶಾರುಖ್‌ ಖಾನ್‌ ಬೆಳ್ಳಿತೆರೆಗೆ ಪರಿಚಯವಾಗಿ ಇಂದಿಗೆ 30 ವರ್ಷ. ಈ ಸಂಭ್ರಮವನ್ನು ಅವರು ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಬೇಡಿ ಹಾಕಿರುವ ಕೈಲಿ ರೈಫಲ್‌ ಹಿಡಿದಿರುವ ಪೋಸ್‌ನೊಂದಿಗಿನ ಮೋಷನ್‌ ಪೋಸ್ಟರ್‌ ರಗಡ್‌ ಆಗಿದೆ. ನಟ ಶಾರುಖ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ಮೋಷನ್‌ ಪೋಸ್ಟರ್‌ ಹಾಕಿ, “30 yrs and not counting cos ur love & smiles have been infinite. Here’s to continuing with #Pathaan. Celebrate #Pathaan with #YRF50 on 25th January, 2023. Releasing in Hindi, Tamil and Telugu.” ಎನ್ನುವ ಸಂದೇಶ ಹಾಕಿದ್ದಾರೆ.

‘ಪಠಾಣ್‌’ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್‌ ಅಬ್ರಹಾಂ ನಟಿಸಿದ್ದಾರೆ. ಚಿತ್ರದಲ್ಲಿನ ಶಾರುಖ್‌ ಲುಕ್‌, ಪಾತ್ರದ ಬಗ್ಗೆ ನಿರ್ದೇಶಕ ಸಿದ್ದಾರ್ಥ್‌ ಆನಂದ್‌ ಮಾತನಾಡಿ, “ಭಾರತದ ಆಕ್ಷನ್‌ ಸಿನಿಮಾ ಜಾನರ್‌ನಲ್ಲಿ ಪಠಾಣ್‌ ಹೊಸ ಬೆಂಚ್‌ಮಾರ್ಕ್‌ ಸೃಷ್ಟಿಸಲಿದೆ. ಶಾರುಖ್‌ ಖಾನ್‌ ಅವರೊಂದಿಗೆ ದೀಪಿಕಾ ಪಡುಕೋಣೆ ಮತ್ತು ಜಾನ್‌ ಅಬ್ರಹಾಂ ಅವರಂತಹ ದೊಡ್ಡ ಸ್ಟಾರ್‌ಗಳು ಚಿತ್ರದಲ್ಲಿದ್ದಾಗ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. ನಾವು ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ” ಎಂದಿದ್ದಾರೆ. 2023ರ ಜನವರಿ 25ರಂದು ಸಿನಿಮಾ ತೆರೆಕಾಣಲಿದೆ.

Previous articleಬಾಲಿವುಡ್‌ಗೆ ನಿರ್ದೇಶಕ‌ ಹರಿ ಸಂತು; ಸೆಟ್ಟೇರಿದ ‘ಪಪ್ಪಿ ಲವ್‌’ ಹಿಂದಿ ಸಿನಿಮಾ
Next articleತಂದೆಯ ನಿರ್ದೇಶನದಲ್ಲಿ ಐಶ್ವರ್ಯಾ ಸರ್ಜಾ; ವಿಶ್ವಕ್‌ ಸೇನ್‌ ಚಿತ್ರದ ಹೀರೋ

LEAVE A REPLY

Connect with

Please enter your comment!
Please enter your name here