ಎಸ್‌ ಜೆ ಸೀನು ನಿರ್ದೇಶನದ ‘ಪೆಟ್ಟಾ RAP’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಪ್ರಭುದೇವ, ವೇದಿಕಾ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ ಮ್ಯೂಸಿಕಲ್‌ ಆಕ್ಷನ್‌ ಚಿತ್ರವಿದು.

ಪ್ರಭುದೇವ ಮತ್ತು ವೇದಿಕಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೆಟ್ಟಾ ರಾಪ್’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಮಲಯಾಳಂ ನಿರ್ದೇಶಕ ಎಸ್ ಜೆ ಸೀನು ನಿರ್ದೇಶಿಸುತ್ತಿದ್ದಾರೆ. ‘ತೇರು’ (2023) ಮತ್ತು ‘ಜಿಬೂಟಿ’ (2021) ಜನಪ್ರಿಯ ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿರುವ ಎಸ್ ಜೆ ಸೀನು ಅವರ ಮೊದಲ ತಮಿಳು ಸಿನಿಮಾ ಇದು. ಮ್ಯೂಸಿಕಲ್ ಆಕ್ಷನ್ ಎಂದು ಹೇಳಲಾದ ಈ ಚಿತ್ರಕ್ಕೆ ದಿನಿಲ್ ಪಿ ಕೆ ಕತೆ ರಚಿಸಿದ್ದಾರೆ. ಶಂಕರ್ ನಿರ್ದೇಶನದ ಪ್ರಭುದೇವ ಅವರ ರೊಮ್ಯಾಂಟಿಕ್ ಚಿತ್ರ ‘ಕಾದಲನ್‌’ ಸಿನಿಮಾದ ಒಂದು ಹಾಡಿನಿಂದ ಈ ಚಿತ್ರ ಸ್ಫೂರ್ತಿ ಪಡೆದಿದೆ. ‘ಆಕ್ಷನ್ ಡ್ಯಾನ್ಸ್ ರಿಪೀಟ್’ ಅಡಿಬರಹವನ್ನು ಹೊದಿರುವ ಈ ಚಿತ್ರವು ಸಂಪೂರ್ಣ ನೃತ್ಯ, ಹಾಡುಗಳಿಂದ ತುಂಬಿದೆ. ಚಿತ್ರವನ್ನು Blue Hill Films ಬ್ಯಾನರ್‌ ಅಡಿಯಲ್ಲಿ ಜೋಬಿ ಪಿ ಸ್ಯಾಮ್ ನಿರ್ಮಿಸುತ್ತಿದ್ದು, Blue Hill Nael Communication ಸಹಯೋಗವಿದೆ. ಇದಲ್ಲದೆ ಪ್ರಭುದೇವ ಅವರು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನಲ್ಲಿ ವಿಜಯ್ ಹೀರೋ ಆಗಿ ನಟಿಸುತ್ತಿರುವ ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್ ತಮಿಳು ಚಿತ್ರವಿದು.

LEAVE A REPLY

Connect with

Please enter your comment!
Please enter your name here