ನಾಗರಾಜ್‌ ಮಂಜುಳೆ ನಿರ್ದೇಶನದ ‘ಝುಂಡ್‌’ ಹಿಂದಿ ಸ್ಪೋರ್ಟ್ಸ್‌ ಡ್ರಾಮಾ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಅಮಿತಾಭ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ‘ಸೈರಾಟ್‌’ ಸಿನಿಮಾ ಖ್ಯಾತಿಯ ಅಕಾಶ್‌ ಥೋಸರ್‌ ಮತ್ತು ರಿಂಕು ರಾಜ್‌ಗುರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್‌ 4ರಂದು ಸಿನಿಮಾ ತೆರೆಕಾಣಲಿದೆ.

ಅಮಿತಾಭ್‌ ಬಚ್ಚನ್‌ ಅಭಿನಯದ ‘ಝುಂಡ್‌’ ಸಿನಿಮಾದ ಮೊದಲ ಪೂರ್ಣ ಟ್ರೈಲರ್‌ ಬಿಡುಗಡೆಯಾಗಿದೆ. ಅಡೆತಡೆಗಳನ್ನು ಹಾಯ್ದು ಗುರಿಯೆಡೆಗೆ ಸಾಗುವ ಸ್ಪೋರ್ಟ್ಸ್‌ ಡ್ರಾಮಾ ಆಗಿ ಟ್ರೈಲರ್‌ ಗಮನ ಸೆಳೆಯುತ್ತದೆ. ‘ಫಂಡ್ರಿ’ ಮತ್ತು ‘ಸೈರಾಟ್‌’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಮರಾಠಿ ನಿರ್ದೇಶಕ ನಾಗರಾಜ್‌ ಮಂಜುಳೆ ನಿರ್ದೇಶನದ ಚಿತ್ರವಿದು. ಸ್ಲಂ ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಟ್ರೈನ್‌ ಮಾಡಿ ಫುಟ್‌ಬಾಲ್‌ ತಂಡ ಕಟ್ಟುವ ತರಬೇತುದಾರನಾಗಿ ಬಚ್ಚನ್‌ ಕಾಣಸಿಕೊಂಡಿದ್ದಾರೆ. ಯುವಕರು ತಪ್ಪು ಹಾದಿ ಹಿಡಿಯುವಲ್ಲಿ ಸಮಾಜ, ಸರ್ಕಾರದ ಪಾತ್ರವೂ ಇದೆ ಎನ್ನುವ ಸಾಮಾಜಿಕ ಸಂದೇಶವೂ ಇಲ್ಲಿದೆ.

ಅಮಿತಾಭ್‌ ಬಚ್ಚನ್‌ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಟ್ರೈಲರ್‌ ಹಂಚಿಕೊಂಡು, “Aayi yeh toli hai, haath milake ek hi cheez boli hai. Aaj aayega trailer, bas rehna taiyaar aap!” ಎನ್ನುವ ಸಂದೇಶ ಹಾಕಿದ್ದರು. ‘ಝುಂಡ್‌’ ಚಿತ್ರದೊಂದಿಗೆ ನಾಗರಾಜ್‌ ಮಂಜುಳೆ ಬಾಲಿವುಡ್‌ ಪ್ರವೇಶಿಸುತ್ತಿದ್ದು, ಅಮಿತಾಭ್‌ ಬಚ್ಚನ್‌ ಜೊತೆ ಅವರಿಗಿದು ಮೊದಲ ಸಿನಿಮಾ ಆಗಿದೆ. ಅಜಯ್‌ – ಅತುಲ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ‘ಸ್ಲಂ ಸಾಕರ್ಸ್‌’ ಹೆಸರಿನ NGO ಸ್ಥಾಪಿಸಿದ ವಿಜಯ್‌ ಬರ್ಸೆ ಅವರ ಸಾಧನೆ ಆಧರಿಸಿ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ‘ಸೈರಾಟ್‌’ ಸಿನಿಮಾ ಖ್ಯಾತಿಯ ಆಕಾಶ್‌ ಥೋಸರ್‌ ಮತ್ತು ರಿಂಕು ರಾಜ್‌ಗುರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Previous articleಬಿಗ್‌ಬಾಸ್‌ ಓಟಿಟಿ ವರ್ಷನ್‌ ‘Bigg Boss Ultimate’; ಕಮಲ್‌ ಜಾಗದಲ್ಲಿ ಸಿಂಬು?
Next articleಟೀಸರ್‌ | ಮೂಢನಂಬಿಕೆ, ಜ್ಯೋತಿಷ್ಯದ ಸುತ್ತ ನಾನಿ ‘ಅಂಟೆ ಸುಂದರಾನಿಕಿ’

LEAVE A REPLY

Connect with

Please enter your comment!
Please enter your name here