ಕರೋನಾ ಕಾರಣದಿಂದ ಬಹಳ ದಿನಗಳಿಂದಲೂ ಸುದ್ದಿಯಾಗದಿದ್ದ ಹಲವು ಚಿತ್ರಗಳು ಈಗ ಮತ್ತೆ ಜೀವ ಪಡೆದುಕೊಳ್ಳುತ್ತಿವೆ. ಅಂತಹ ಚಿತ್ರಗಳಲ್ಲೊಂದು ‘ಅಮೃತ್‌ ಅಪಾರ್ಟ್‌ಮೆಂಟ್ಸ್‌’.

ಬಿಡುಗಡೆಗೆ ಸಿದ್ಧವಾಗಿರುವ ‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ತಂಡ, ಮೊದಲ ಹೆಜ್ಜೆಯಾಗಿ ‘ನಾವು ಬಂದೇವಾ’ ಎನ್ನುವ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ.ಬಿ.ಆರ್. ಪೋಲಿಸಪಾಟೀಲರವರು ಈ ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ವಲಸಿಗರ ಕುರಿತು, ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ)ರವರ ಕಲ್ಪನೆಗೆ ತಕ್ಕಂತೆ ದೇಸಿ ಸೊಗಡಿನ ಪದಗಳನ್ನು ಬಳಸಿಕೊಂಡು ಈ ಹಾಡಿನ ಸಾಹಿತ್ಯ ರಚಿಸಲಾಗಿದೆ.

ಈ ಹಾಡಿಗೆ ತಮ್ಮ ಸತ್ವಶಾಲಿ ಧ್ವನಿಯನ್ನು ಧಾರೆಯೆರೆದು, ಹಾಡಿಗೆ ಮೆರಗು ನೀಡುವಂತೆ ಹಾಡಿರುವವರು ರಾಜ್ಯ ಪ್ರಶಸ್ತಿ ವಿಜೇತ ಗಾಯಕ,  ತೇಜಸ್ವಿ ಹರಿದಾಸ. “ಈ ಹಾಡಿನಲ್ಲಿ ಬಳಸಿದ ಉತ್ತರ ಕರ್ನಾಟಕದ ಪರಿಚಿತವಲ್ಲದ ಶಬ್ದಗಳನ್ನು ಸರಿಯಾಗಿ ಉಚ್ಚರಿಸಲು, ಶ್ರಮವಹಿಸಿ ತಾಲೀಮ್ ಮಾಡಿ ನಿರ್ದೇಶಕರಿಂದ ಸೈ ಅನ್ನಿಸಿಕೊಂಡು ಹಾಡಿದ್ದು, ಬಹು ದೀರ್ಘಕಾಲ ನನ್ನ ನೆನಪಿನಲ್ಲಿ ಉಳಿಯುವಂತಹದ್ದು” ಎನ್ನುತ್ತಾರವರು. ದೇಸಿ ಸಾಹಿತ್ಯದ ಈ ಸುಂದರ ಗೀತೆಯನ್ನು ಇಂದಿನ ಯುವಕ-ಯುವತಿಯರ ಅಭಿರುಚಿಗೆ ತಕ್ಕಂತೆ ಸಂಗೀತ ನೀಡಿರುವವರು ಎಸ್.ಡಿ. ಅರವಿಂದ್‌. ‘ನಾವು ಬಂದೇವ್’ ಎಂದು ಶುರುವಾಗುವ ಈ ಹಾಡು ವೈರಲ್ ಆಗುವದರಲ್ಲಿ ಸಂಶಯವೇ ಇಲ್ಲ ಎನ್ನುವುದು ಚಿತ್ರ ತಂಡದ ಅಭಿಪ್ರಾಯ.

Previous articleಜಾಲಿ ‘ರೈಡರ್’ ಸಾಂಗ್; ನಿಖಿಲ್‌ಗೆ ಈಗಲೂ ಢವ ಢವ ಅಂತೆ
Next articleಹಿರಿಯ ನಟ ಶಂಕರರಾವ್ ಇನ್ನಿಲ್ಲ; ಹಾಸ್ಯಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದ ಕಲಾವಿದ

LEAVE A REPLY

Connect with

Please enter your comment!
Please enter your name here