Prime Videoದಲ್ಲಿ ಸ್ಟ್ರೀಮ್‌ ಆಗುತ್ತಿರುವ ನಾಗಚೈತನ್ಯ ನಟನೆಯ ‘ಧೂತ’ ಸರಣಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ನಟ ನಾಗಚೈತನ್ಯ ಮತ್ತೆರೆಡು ನೂತನ OTT ಸರಣಿಗಳಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಯುವ ನಿರ್ದೇಶಕರೊಬ್ಬರು ನಟನಿಗೆ ಓಟಿಟಿ ಪ್ರಾಜೆಕ್ಟ್‌ ನಿರ್ದೇಶಿಸಲಿದ್ದಾರೆ ಎನ್ನುವ ಸೂಚನೆಯಿದೆ.

‘ಧೂತ’ ಸರಣಿ ಯಶಸ್ಸಿನ ನಂತರ ನಟ ನಾಗಚೈತನ್ಯ ಮುಂದಿನ ವರ್ಷ ಇನ್ನೆರಡು ಹೊಸ OTT ಯೋಜನೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. Prime Videoದ ‘ಧೂತ’ ಸರಣಿ ಮೂಲಕ ನಾಗಚೈತನ್ಯ OTT ಪ್ಲಾಟ್‌ಫಾರ್ಮ್‌ ಪ್ರವೇಶಿಸಿದ್ದರು. ವಿಕ್ರಮ್‌ ಕುಮಾರ್‌ ನಿರ್ದೇಶಿಸಿದ್ದ ಸರಣಿ ದೊಡ್ಡ ಯಶಸ್ಸು ಕಂಡಿದೆ. ಈ ಸರಣಿಯು ಸತತ ಎರಡು ವಾರಗಳವರೆಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಈ ಯಶಸ್ಸಿನ ಸಂತಸದಲ್ಲಿರುವ ಚೈತನ್ಯ ನೂತನ OTT ಯೋಜನೆಗಳ ಸ್ಕ್ರಿಪ್ಟ್‌ ಕೇಳುತ್ತಿದ್ದಾರೆ. ಯುವ ನಿರ್ದೇಶಕರೊಬ್ಬರು ಓಟಿಟಿಗಾಗಿ ನಾಗಚೈತನ್ಯ ಅವರನ್ನು ನಿರ್ದೇಶಿಸಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ.

ಸದ್ಯ ಸ್ಟ್ರೀಮ್‌ ಆಗುತ್ತಿರುವ ‘ಧೂತ’ ಎಂಟು ಸಂಚಿಕೆಗಳ ಸರಣಿ. ಮಹತ್ವಾಕಾಂಕ್ಷೆ ಹೊಂದಿರುವ ಪತ್ರಕರ್ತ ಸಾಗರ್ (ನಾಗ ಚೈತನ್ಯ)ನ ಸುತ್ತ ಸುತ್ತುತ್ತದೆ. ಸಾಗರ್‌ ಹಲವು ನಿಗೂಢ ಸಾವುಗಳ ಘಟನೆಗಳಲ್ಲಿ ಸಿಲುಕಿಕೊಳ್ಳುತ್ತಾನೆ. ಇದು ಅವನ ಕುಟುಂಬವನ್ನೂ ಸಹ ಹೇಗೆ ಆವರಿಸುತ್ತದೆ ಎಂಬುದನ್ನು ಸರಣಿ ಒಳಗೊಂಡಿದೆ. ಸರಣಿಯನ್ನು NorthStar Entertainment Pvt. Ltd ಬ್ಯಾನರ್‌ ಅಡಿಯಲ್ಲಿ ಶರತ್ ಮರಾರ್ ನಿರ್ಮಿಸಿದ್ದಾರೆ. ಸರಣಿಯು ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್‌ 1, 2023ರಿಂದ Prime Videoದಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಸದ್ಯ ಚೈತನ್ಯ ಅವರ ‘ತಾಂಡೇಲ್‌’ ಸಿನಿಮಾದ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದ್ದು, ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಚಿತ್ರವು ಮೀನುಗಾರರ ಕಥೆಯನ್ನು ವಿವರಿಸಲಿದೆ. ‘ಕಾರ್ತಿಕೇಯ 2’ ಖ್ಯಾತಿಯ ಚಂದೂ ಮೊಂಡೇಟಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here